Site icon PowerTV

ಬಾಟಲಿ ಹಿಡಿದು ಮಧ್ಯದ ಬೆರಳು ತೋರಿಸಿದ ಸೈಲೆಂಟ್​ ನಟಿ ಆಶಿಕಾ ರಂಗನಾಥ್​

ಬೆಂಗಳೂರು: ಮದ್ಯದ ಬಾಟಲಿ ಹಿಡಿದು ಸಿಕ್ಕ ಸಿಕ್ಕವರಿಗೆ ನಟಿ ಆಶಿಕಾ ರಂಗನಾಥ್ ಆವಾಜ್‌ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿ ನಟಿ ಆಶಿಕಾ ರಂಗನಾಥ್​, ಕನ್ನಡದ ರೇಮೊ ಶೂಟಿಂಗ್ ಸೆಟ್ ನಲ್ಲಿ ಕುಡಿದು ಅನುಚಿತವಾಗಿ ವರ್ತನೆ ತೋರಿದ್ದಾಳೆ ಎನ್ನಲಾಗಿದೆ. ಇದೇ ನವೆಂಬರ್ 25ಕ್ಕೆ ಆಶಿಕಾಳ ರೇಮೊ ಚಿತ್ರ ತೆರೆಗೆ ಬರುತ್ತಿದೆ. ಶೂಟಿಂಗ್ ವೇಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಿಂದ ಆಶಿಕಾ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ.

ನಟಿ ಆಶಿಕಾ ರಂಗನಾಥ್​ ವಿಡಿಯೋ ವೈರಲ್ ಗೆ ನಿರ್ದೇಶಕ ಸ್ಪಷ್ಟನೆ ಕನ್ನಡ ಚಿತ್ರದ ರೇಮೊ ಡೈರೆಕ್ಟರ್ ಪವನ್ ಒಡೆಯರ್, ಇದು ಮಾರ್ಕೆಟಿಂಗ್ ಟೀಂ ನಿಂದ ಆಗಿರೋ ಎಡವಟ್ಟು. ಸಿನಿಮಾದ ಪ್ರಮುಖ ಸೀಕ್ವೆನ್ಸ್ ಇದು. ಸಿನಿಮಾ ಪ್ರಮೋಷನ್ಸ್ ಗಾಗಿ ಇದನ್ನ ಬಳಸಲಾಗಿದೆ. ಆಶಿಕಾ ಆ ತರಹದ ಹುಡುಗಿ ಅಲ್ಲ. ಬಹಳ ಒಳ್ಳೆಯ ವ್ಯಕ್ತಿತ್ವದವರು. ಇಡೀ ಚಿತ್ರತಂಡದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ವಿಡಿಯೋ ಮೂಲಕ‌ ಪವರ್​ ಒಡೆಯರ್​ ಅವರು ಆಶಿಕಾಗೆ ಕ್ಷಮೆ ಕೇಳಿದ್ದಾರೆ.

ರೆಮೋ ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ. ಇದು ಕೋವಿಡ್‌ನಿಂದಾಗಿ ದೀರ್ಘಕಾಲದಿಂದ ನಿರ್ಮಾಣವಾಗುತ್ತಿರುವ ಚಲನಚಿತ್ರವಾಗಿದೆ. ಆದರೆ, ಸಿನಿಮಾ ಶುರುವಾದಾಗಿನಿಂದ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ನವೆಂಬರ್ 25 ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Exit mobile version