Site icon PowerTV

ತಿಹಾರ್​ ಜೈಲ್​ನಲ್ಲಿ AAP ಆರೋಗ್ಯ ಸಚಿವನಿಗೆ ಮಸಾಜ್ ವ್ಯವಸ್ಥೆ

ನವದೆಹಲಿ: ಆಮ್ ಆದ್ಮಿ(ಎಎಪಿ) ಪಕ್ಷದ ಮಾಜಿ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಬಿಜೆಪಿ(ಭಾರತೀಯ ಜನತಾ ಪಾರ್ಟಿ) ಶನಿವಾರ ಬಿಡುಗಡೆ ಮಾಡಿದೆ.

ಜೈನ್‌ಗೆ ವಿಐಪಿ ಚಿಕಿತ್ಸೆ ನೀಡಿದ್ದಕ್ಕಾಗಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವು ದಿನಗಳ ನಂತರ ಈ ವಿಡಯೋ ಹೊರಬಿದ್ದಿದೆ. ತಿಹಾರ್ ಜೈಲಿನ ಮೂಲಗಳ ಪ್ರಕಾರ, ಈ ವಿಡಿಯೋ ಹಳೆಯದು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿ ವಿರುದ್ಧ ಜೈಲು ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸತ್ಯೇಂದ್ರ ಜೈನ್‌ಗೆ ತಿಹಾರ್ ಜೈಲಿನಲ್ಲಿ ವಿಐಪಿ ಚಿಕಿತ್ಸೆ ನೀಡಲಾಗುತ್ತಿದ್ದು, ತಲೆ ಮಸಾಜ್, ಪಾದ ಮಸಾಜ್ ಮತ್ತು ಬೆನ್ನಿಗೆ ಮಸಾಜ್‌ ಮಾಡುತ್ತಿರುವ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಹಣಕಾಸು ತನಿಖಾ ಸಂಸ್ಥೆಯು ದೆಹಲಿ ಸಚಿವರ ಜೈಲಿನಲ್ಲಿ “ಐಷಾರಾಮಿ ಜೀವನ” ಕ್ಕೆ ಸಂಬಂಧಿಸಿದ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

Exit mobile version