Site icon PowerTV

ಇಂದಿನಿಂದ ಜೆಡಿಎಸ್​ನ ‘ಪಂಚರತ್ನ’ ರಥಯಾತ್ರೆ ಆರಂಭ

ಕೋಲಾರ: ಇಂದಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಕನಸಿನ ಕಾರ್ಯಕ್ರಮ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆಯ ಮುಳುಬಾಗಿಲಿನಿಂದ ಆರಂಭವಾಗಲಿದೆ.

ನವೆಂಬರ್ 1 ರಂದು ಮುಳುಬಾಗಿಲು ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದರು. ಆದರೆ, ಆಗ ಸತತವಾಗಿ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನ ಮುಂದೂಡಿಕೆ ಮಾಡಲಾಗಿತ್ತು.

ಇಂದಿನಿಂದ ಪಂಚರತ್ನ ಆರಂಭವಾಗುವ ಹಿನ್ನಲೆಯಲ್ಲಿ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಸಮಾವೇಶ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 12.30 ಕ್ಕೆ ನಡೆಯಲಿರುವ ಸಮಾವೇಶ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕುರು ಭಾಗದಲ್ಲಿ ಈ ಸಮಾವೇಶ ನಡೆಯಲಿದೆ.

ಇನ್ನೇನು ಕೆಲವೇ ತಿಂಗಳು ವಿಧಾನಸಭಾ ಚುನಾವಣೆ ಬೆನ್ನಲ್ಲೇ ಪಂಚರತ್ನ ಯಾತ್ರೆಯಲ್ಲಿಂದು ಕುಮಾರಸ್ವಾಮಿ ಅವರು ಮೊದಲ‌ ಹಂತದ 90 ಅಭ್ಯರ್ಥಿಗಳ ಪಟ್ಟಿಯಲ್ಲಿ ಘೋಷಿಸಲಿದ್ದಾರೆ. ಕ್ಷೇತ್ರವಾರು ವರದಿ, ಅಭ್ಯರ್ಥಿ ವರ್ಚಸ್ಸು, ಪಕ್ಷ ಸಂಘಟನೆ, ಚುನಾವಣಾ ಸಿದ್ದತೆ ಆಧರಿಸಿ ಕುಮಾರಸ್ವಾಮಿ ಟಿಕೆಟ್ ಫೈನಲ್ ಮಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ಗಿಂತ ಮೊದಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಜೆಡಿಎಸ್​ ಅಭ್ಯರ್ಥಿಗಳ ಜೆಡಿಎಸ್​ ಘೋಷಣೆ ಮಾಡಲಿದ್ದಾರೆ. ಎರಡನೇ ಹಂತವಾಗಿ ಹಳೇ ಮೈಸೂರು ಭಾಗ, ಕರಾವಳಿ ಭಾಗ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಜೆಡಿಎಸ್​ ಪಂಚ ರಥಯಾತ್ರೆ ಮಾಡಲಿದ್ದಾರೆ.

Exit mobile version