Site icon PowerTV

‘ಬಿಜೆಪಿಯವ್ರು 40%, ಕಾಂಗ್ರೆಸ್ 20% : ಸಿಎಂ ಇಬ್ರಾಹಿಂ

ಕೋಲಾರ : ಬಿಜೆಪಿಯವ್ರು 40%, ಕಾಂಗ್ರೆಸ್ 20% ನವ್ರು. ಕೆಲವರಿಗೆ ನಿಲ್ಲಲು ಕ್ಷೇತ್ರ ಸಿಗ್ತಾ ಇಲ್ಲ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.

ಮುಳಬಾಗಿಲಿನಲ್ಲಿ ಜೆಡಿಎಸ್​ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 1994ರಲ್ಲಿ ಇಲ್ಲಿ‌ ಜೆಡಿಎಸ್​ ದೊಡ್ಡ ಸಭೆ ನಡೆಸಿತ್ತು. ಆದ್ರೆ ಇಂದು ಅದಕ್ಕಿಂತ ಎರಡಷ್ಟು ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ. ಜನತಾದಳದ ನಾಯಕರು ಜೈಲಿನಲ್ಲೂ ಇಲ್ಲ. ಬೇಲ್​​ನಲ್ಲೂ ಇಲ್ಲ ಎಂದು ವ್ಯಂಗ್ಯವಾಡಿದರು.

ಕೆಂಪೇಗೌಡರ ಮೂರ್ತಿಯ ಪ್ರತಿಷ್ಠಾಪನೆಗೆ ಮಾಜಿ ಪ್ರಧಾನಮಂತ್ರಿ ದೇವೇಗೌಡರನ್ನು ಬಿಟ್ಟು ಮಾಡ್ತೀರಿ. ಮನೆಗೆ ಬಂದ್ರೆ ಅವರ ಕಾಲಿಗೆ ಬೀಳುತ್ತೀರಿ. ಸಮಯ ಬರ್ಲಿ ವಿಧಾನಸೌಧದ ಎದುರಲ್ಲೇ ಕೆಂಪೇಗೌಡರ ಮೂರ್ತಿ ನಿಲ್ಲಿಸಿ ದೇವೇಗೌಡರಿಂದ ಉದ್ಘಾಟನೆ ‌ಮಾಡಿಸ್ತೀವಿ ಎಂದರು.

ಇನ್ನು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಕ್ಷೇತ್ರವಿಲ್ಲದೆ ಪರದಾಡುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಎರಡು ಜೋಡೆತ್ತುಗಳು ಮುಖ್ಯಮಂತ್ರಿ ಗಾದಿಗಾಗಿ ಕಿತ್ತಾಡುತ್ತಿದ್ದಾರೆ. 2023ರ ಚುನಾವಣೆ ಬರಲಿ, ಜೆಡಿಎಸ್​ ಪಕ್ಷ ಏನೆಂದು ತೋರಿಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಬೇಕು ಎಂದರು.

Exit mobile version