Site icon PowerTV

ಸಿದ್ದರಾಮಯ್ಯ ಅವಧಿಯ ಜಾತಿ ಸಮೀಕ್ಷೆ ಕೆದಕಿ ಸಿಎಂ ಬೊಮ್ಮಾಯಿ ಕೌಂಟರ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವೇಳೆಯಲ್ಲಿ ಜಾತಿ ಸಮೀಕ್ಷೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೌಂಟರ್ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಆರೋಪ ಮಾಡಿದ ಬಗ್ಗೆ ಪೋಲಿಸ್ ದೂರು ಆಗುತ್ತದೆ. ತನಿಖೆಯೂ ಆಗುತ್ತೆ ಇದರಲ್ಲಿ ಮುಚ್ಚಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ 130 ಕೋಟಿ ರೂ ಖರ್ಚು ಮಾಡಿ ಕರ್ನಾಟಕ ಸಾಮಾಜಿಕ ಆರ್ಥಿಕ ಸರ್ವೆ ನಡೆಸಿದ್ದಾರೆ. ಜಾತಿ‌, ಉಪಜಾತಿ, ಮರಿಜಾತಿ ಎಲ್ಲಾ ಜಾತಿಗಳನ್ನು ಸೇರಿಸಿ 108 ಜಾತಿ ಮಾಡಿ ದಾಖಲೆಗಳನ್ನು ಮಾಡಿ ಸರ್ವೆ ನಡೆಸಿ, ದಾಖಲೆ ಮಾಡಿದ್ದಾರೆ. ಇದನ್ನ ಚುನಾವಣೆ ಆಯೋಗದ ಮೂಲಕ ಮಾಡಿಸದೇ ಬಹಿರಂಗ ಮಾಡದೇ ಎಲೆಕ್ಷನ್‌ಗೆ ಕಾಂಗ್ರೆಸ್ ಉಪಯೋಗ ಮಾಡಿಕೊಂಡರು. ಇದಕ್ಕಿಂದ ದೊಡ್ಡದೇನಾಗಬೇಕು. ಈ ದೂರು ಆಧಾರದ ಮೇಲೆ ಮೊದಲೇನಾದ್ರೂ ಶಿಕ್ಷೆಯಾಗಬೇಕಿದ್ರೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದಲ್ಲಿದ್ದವರಿಗೆ ಶಿಕ್ಷೆಯಾಗಬೇಕು. ಕಾಂಗ್ರೆಸ್​ ಆರೋಪ ಮಾಡಿದ ಇದ್ರಲ್ಲಿ ನಮಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಹಲವಾರು ವರ್ಷದಿಂದ ಚುನಾವಣಾ ಆಯೋಗ ಯಾವಗಲೂ ಜಾಗೃತಿ ಮೂಡಿಸಲು ಕಾರ್ಯಕ್ರಮ ಮೂಡಿಸುತ್ತಿದೆ. ಯಾವುದೋ ಎನ್​​ಜಿಓಗೆ ಬಿಬಿಎಂಪಿಯವರು ಮತದಾರರ ಮಾಹಿತಿ ಕಲೆಹಾಕಲು ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಎಲ್​ಓ ಅಂತ ಹಾಕಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನುಳಿದಂತೆ ಎಲ್ಲವೂ ಊಹಾಪೋಹಗಳು. ಊಹಾಪೋಹಗಳ ಮೇಲೆ ದೊಡ್ಡ ಆರೋಪ ಮಾಡ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ ಎಂದರು.

Exit mobile version