Site icon PowerTV

ಕಾಲೇಜುಗಳಲ್ಲಿ ಮಹಿಳಾ ಆಯೋಗ ಕ್ಲಾಸ್..!

ಬೆಂಗಳೂರು : ಕಿರಾತಕನ ಜೊತೆ ಡೇಟಿಂಗ್ ಆಪ್ ಚಾಟಿಂಗ್, ಲೀವ್ ಇನ್ ರಿಲೇಷನ್ ನಲ್ಲಿ ಇಲ್ಲದೇ ಇದ್ದಿದ್ರೇ ಶ್ರದ್ಧಾಳಿಗೆ ಈ ಪರಿಸ್ಥಿತಿ ಬರ‍್ತಾ ಇರಲಿಲ್ವೋನೋ.! ಡೇಟಿಂಗ್ ಆಪ್ ಗಳ ಮೂಲಕ ಮುಖವಾಡ ಧರಿಸಿಕೊಂಡಿರುವ ಇಂತಹ ಕ್ರಿಮಿಗಳ ಕಾಟದಿಂದ , ನರರಾಕ್ಷಸರ ಜೊತೆ ಲೀವ್ ಇನ್ ರಿಲೇಷನ್‌ನಲ್ಲಿರೋದ್ರಿಂದ ಅದೆಷ್ಟೋ ಹುಡ್ಗೀರ ಬದುಕು ಬರ್ಬಾದ್ ಆಗಿದೆ. ಕರ್ನಾಟಕದಲ್ಲಿಯೂ ಅದ್ರಲ್ಲೂ ನಗರ ಪ್ರದೇಶದಲ್ಲಿ ಈ ಆಪ್‌ಗಳು ರಿಲೇಷನ್‌ಶಿಪ್‌ನ ವಿಷವರ್ತುಲದಲ್ಲಿ ಹೆಣ್ಣುಮಕ್ಕಳು ಸಿಲುಕಿದ್ದಾರೆ. ಹೀಗಾಗಿ ಜಾಗೃತಿಗಾಗಿ ಕರ್ನಾಟಕ ಮಹಿಳಾ ಆಯೋಗ ಫೀಲ್ಡ್‌ಗಿಳಿದಿದೆ.

ಇತ್ತೀಚಿನ ದಿನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಲೀವ್ ಇನ್ ರಿಲೇಷನ್‌ಗಳಿಂದ ಆಗಬಹುದಾದ ತೊಡಕು, ಈ ರೀತಿಯ ಆಪ್‌ಗಳಿಂದ ಆಗಲಿರುವ ತೊಂದರೆಯ ಬಗ್ಗೆ ತಜ್ಞರನ್ನು ಕರೆಸಿ ವಿಶೇಷ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ. ಕಾಲೇಜ್ ಮಾತ್ರವಲ್ಲದೇ ಮಹಿಳಾ ಉದ್ಯೋಗಿಗಳು ಇರುವ ಸಂಸ್ಥೆಯಲ್ಲೂ ಕೂಡ ಜಾಗೃತಿ ತರಗತಿ ನಡೆಸಲು ಆಯೋಗ ಮುಂದಾಗಿದೆ.

ಈಗಾಗಲೇ ರಾಜ್ಯದಲ್ಲಿ ಲೀವ್ ಇನ್ ರಿಲೇಷನ್ ಶಿಪ್‌ನಿಂದಾಗಿ ಸಾಕಷ್ಟು ಮಹಿಳೆಯರು ತೊಂದರೆ ಅನುಭವಿಸಿದ್ದು, ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. ಜೊತೆಗೆ ಕಾಲೇಜ್ ಓದುವ ವಿದ್ಯಾರ್ಥಿಗಳು ಈ ಆಪ್ ಗಳಿಗೆ ಅಡಿಕ್ಟ್ ಆಗಿರೋದ್ರಿಂದ ಇದ್ರಿಂದ ಹೊರಬರುವ ಬಗ್ಗೆ ಕೂಡ ಹೆಚ್ಚಿನ ಜಾಗೃತಿ ಅತ್ಯಗತ್ಯವಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

Exit mobile version