Site icon PowerTV

ದುಡ್ಡು-ದುಡ್ಡು ಎನ್ನುತ್ತಿದ್ದ ಹೆಂಡತಿ ಕಾಟ ತಾಳಲಾರದೆ ಗಂಡ ಆತ್ಮಹತ್ಯೆ.!

ಬೆಂಗಳೂರು: ಮನುಷ್ಯನ ಜೀವನದಲ್ಲಿ ಅದೆಷ್ಟೋ ಏರಿಳಿತ ಇರುತ್ತಿದೆ. ಇದನ್ನ ಸರಿಪಡಿಸಿಕೊಂಡು ಹೋದರೆ ಸಂಸಾರ ಎಂಬ ಜೀವನ ಸುಕಸಾಗರ. ಆದರೆ, ಗಂಡ-ಹೆಂಡತಿ ನಡುವೆ ಹಳಿ ತಪ್ಪಿದರೆ ಅದು ಗಲಾಟೆ, ಆತ್ಮಹತ್ಯೆ ಎಂಬ ಕಾಟ ಆರಂಭವಾಗುತ್ತದೆ.

ಹೌದು.. ಗಂಡ-ಹೆಂಡತಿ ನಡುವೆ ಪರಸ್ಪರ ನೆಮ್ಮದಿ ಇರದ ಕಾರಣಕ್ಕೆ ಗಂಡ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರ ಬಳಿಯ ಅವಲಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಅಣ್ಣಯ್ಯ ಎಂಬ ಪತಿ, ದಿನಂಪತ್ರಿ ಹೆಂಡತಿಯ ಸುಖಾಸುಮ್ಮನೆ ಕಾಟ ನೀಡುತ್ತಿದ್ದಳು ಎಂದು ಡೆತ್ ನೋಟ್ ಬರೆದಿಟ್ಟು ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಗಂಡ ಅಣ್ಣಯ್ಯ ಎಂಬುವನು ಮೂಲತಃ ಮಂಡ್ಯದ ನಾಗಮಂಗಲದವನಾಗಿದ್ದಾನೆ. ಕಳೆದ ಐದು ವರ್ಷಗಳ ಹಿಂದೆ ಉಮಾ ಎಂಬಾಕೆಯನ್ನು ಈತ ಮದುವೆ ಮಾಡಿಕೊಂಡಿದ್ದ.

ಮದುವೆ ಬಳಿಕ ಸಂಸಾರ ಎಂಬ ರಸ್ತೆಯ ಹಳಿ ನೆಟ್ಟಗೆ ನಡೆಯುತ್ತಿತ್ತು. ಆದರೆ, ಗಂಡ ಎಷ್ಟು ದುಡಿದ್ರು ಹೆಂಡತಿ ದುಡ್ಡು ದುಡ್ಡು ಎನ್ನುತ್ತಿದ್ದಳಂತೆ, ನಾನು ಎಷ್ಟು ದುಡಿದ್ರು ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ಮ ಸಾವಿಗೆ ನಾನೆ ಕಾರಣ ಎಂದು ಡೆತ್ ನೋಟು ಬರೆದಿಟ್ಟು ಗಂಡ ಅಣ್ಣಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಹನುಮಂತ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version