Site icon PowerTV

ರಿಷಿ ಸುನಕ್‌ಗೆ ಗುಜರಾತ್​ ಕಲಾಕೃತಿ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಇಂಡೋನೇಷ್ಯಾ; ಜಿ-20 ಶೃಂಗಸಭೆಗಾಗಿ ಇಂಡೋನೇಷ್ಯಾದ ಬಾಲಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ವಸ್ತುಗಳನ್ನು ವಿಶ್ವದ ವಿವಿಧ ನಾಯಕರಿಗೆ ಉಡುಗೊರೆಯಾಗಿ ನೀಡಿದರು.

ಫ್ರಾನ್ಸ್, ಜರ್ಮನಿ ಮತ್ತು ಸಿಂಗಾಪುರದ ನಾಯಕರಿಗೆ ಮೋದಿಯವರು ಉಡುಗೊರೆಯಾಗಿ ನೀಡಿದ್ದು ಗುಜರಾತ್‌ನ ಕಚ್ ಪ್ರದೇಶಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕರಕುಶಲ ವಸ್ತುಗಳಾದ ‘ಅಗೇಟ್ ಬೌಲ್‌ಗಳು’ ನೀಡಿದರು. ಅದೇ ರೀತಿ ಇಂಗ್ಲೆಂಡ್​ ಪ್ರಧಾನಿ ರಿಷಿ ಸುನಕ್ ಅವರಿಗೆ ಅವರು ಉಡುಗೊರೆಯಾಗಿ ಗುಜರಾತಿ ಕರಕುಶಲ ವಸ್ತುವಾದ ‘ಮಾತಾ ನಿ ಪಚೇಡಿ’ ನೀಡಿದ್ದಾರೆ. ಈ ಹೆಸರು ಗುಜರಾತಿ ಪದಗಳಾದ ‘ಮಾತಾ’ ಅಂದರೆ ‘ಮಾತೃದೇವತೆ’, ‘ನಿ’ ಎಂದರೆ ‘ಸೇರಿದೆ’ ಮತ್ತು ‘ಪಚೇಡಿ’ ಎಂದರೆ ‘ಹಿನ್ನೆಲೆ’ ಯಾಗಿದೆ. ದೇವಾಲಯಗಳಲ್ಲಿ ಕಾಣಿಕೆಯಾಗಿ ಬಳಸುವ ಗುಜರಾತ್‌ನ ಕೈಯಿಂದ ಮಾಡಿದ ಜವಳಿಯಿಂದ ಈ ಹೆಸರು ಬಂದಿದೆ. ಏತನ್ಮಧ್ಯೆ, ಮೋದಿ ಅವರು ಟ್ವಿಟರ್‌ನಲ್ಲಿ ‘ಪ್ರಧಾನಿ ರಿಷಿ ಸುನಕ್’ ಅವರನ್ನು ಭೇಟಿಯಾದ ಫೋಟೋವನ್ನ ಹಂಚಿಕೊಂಡಿದ್ದಾರೆ.

Exit mobile version