Site icon PowerTV

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭೇಟಿಯಾದ ನರೇಂದ್ರ ಮೋದಿ

ನವದೆಹಲಿ: 17 ನೇ ಜಿ–20 ಗುಂಪಿನ ಶೃಂಗಸಭೆಗೆ ಮಂಗಳವಾರ(ಇಂದು) ಇಂಡೋನೆಷ್ಯಾದ ಬಾಲಿಯಲ್ಲಿ ಚಾಲನೆ ಸಿಕ್ಕಿದೆ.

ಇನ್ನು ಈ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿದಂತೆ ವಿಶ್ವ ನಾಯಕರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ.

ಜಾಗತಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್‌ ರೂಪಾಂತರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತ ಚರ್ಚೆಗೂ ಸಭೆ ವೇದಿಕೆ ಕಲ್ಪಿಸಲಿದೆ.

Exit mobile version