Site icon PowerTV

ಬಾಲಿವುಡ್​​ ಜಾನಿ ಲಿವರ್’ನ ಕನ್ನಡಕ್ಕೆ ಕರೆತಂದಿದ್ದ ನಿರ್ದೇಶಕ ಇನ್ನಿಲ್ಲ

ಬೆಂಗಳೂರು: ಬ್ರೈನ್ ಟೂಮರ್ ನಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ನ ನಿರ್ದೇಶಕ ಕೆಆರ್​​ ಮುರಳಿ ಕೃಷ್ಣ(63) ಅವರು ನಿಧನರಾಗಿದ್ದಾರೆ.

ಬ್ರೈನ್ ಟೂಮರ್ ನಿಂದ ಬಳಲುತ್ತಿದ್ದ ಸಣ್ಣ ಸತ್ಯ, ಗರ ಚಿತ್ರಗಳ ನಿರ್ದೇಶಕ, ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಬ್ರೈನ್ ಟೂಮರ್ ಇರೋದು ತಡವಾಗಿ ಬೆಳಕಿಗೆ ಬಂದಿದೆ. ಬಳಿಕ ಲಾಲ್ ಬಾಗ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೂಡಲೇ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶಸ್ತ್ರ ಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ.

ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಇದ್ದು, ಗರ ಸಿನಿಮಾಗಾಗಿ ಬಾಲಿವುಡ್ ನ ಜಾನಿ ಲಿವರ್’ನ ಕೃಷ್ಣ ಅವರು ಕನ್ನಡಕ್ಕೆ ಪೆರದೆ ಮೇಲೆ ಕರೆತಂದಿದ್ದರು. ಇವರು ವೃತ್ತಿಯಲ್ಲಿ ವಕೀಲರಾದರೂ, ಸಿನಿಮಾನ ಪ್ರವೃತ್ತಿಯಾಗಿಸಿಕೊಂಡಿದ್ದರು.

ಇನ್ನು ಕೃಷ್ಣ ಅವರ ಸಹಕಾರ ನಗರದ ತಮ್ಮ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇಂದು ಮಧ್ಯಾಹ್ನ 12:30ಕ್ಕೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕಟುಂಬಸ್ಥರು ತಿಳಿಸಿದ್ದಾರೆ. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು.

Exit mobile version