Site icon PowerTV

ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ !

ಮಂಡ್ಯ : ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿಯಾದ ಘಟನೆ ಮಂಡ್ಯದ ಕಾರಿಮನೆ ಗೇಟ್ ಬಳಿ ನಡೆದಿದೆ.

ಕುಮಾರ್(38) ಮೃತ ನಿವೃತ್ತ ಯೋಧ. ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಪಡೆದಿದ್ದ ಕುಮಾರ್, ಬೆಂಗಳೂರಿನಲ್ಲೇ ಪೊಲೀಸ್ ಪೇದೆ ಹುದ್ದೆಗೆ ನೇಮಕವಾಗಿ ತರಬೇತಿ ಪಡೆಯುತ್ತಿದ್ದ. ತಂದೆ ಜೊತೆ ಸಾತನೂರು ಗ್ರಾಮಕ್ಕೆ ಹೋಗುವಾಗ ಈ ಘಟನೆ ನಡೆದಿದೆ.

ಇನ್ನು, ಮಂಡ್ಯದ ಕಾರಿಮನೆ ಗೇಟ್ ಬಳಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದು, ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟ ಮಗನ ಕಂಡು ತಂದೆಯು ಗೋಳಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.

Exit mobile version