Site icon PowerTV

ಭಾಷಣದಲ್ಲಿ ಶಾಸಕ ಜಿಟಿ ದೇವೇಗೌಡ ನೆನಪಿಸಿಕೊಂಡ ಸಿದ್ದರಾಮಯ್ಯ

ಮೈಸೂರು: ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಷಣದಲ್ಲಿ ಆಹ್ವಾನಿಸುವ ಸಂದರ್ಭದಲ್ಲಿ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡರನ್ನ ಸಿದ್ದರಾಮಯ್ಯ ಅವರು ಸ್ಮರಿಸಿಕೊಂಡಿದ್ದಾರೆ.

ಸ್ವಾಗತದ ವೇಳೆ ಚಾಮುಂಡೇಶ್ವರ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡರ ಹೆಸರು ನೋಡಿ ಜಿ.ಟಿ ದೇವೇಗೌಡ ಬಂದಿಲ್ವಾ ಎಂದು ನಕ್ಕು ಸುಮ್ಮನಾಗಿದ್ದಾರೆ. ಕರುಣಾಕರ ಅಂಥಾ ಹೆಸರು ಇಟ್ಟರೆ ಸಾಲದು‌ ಕರುಣೆ ಸಹ ಇರಬೇಕು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜನಸ್ನೇಹಿ ಆಗಬೇಕು. ನಂಗೆ ಬಹಳ ದಿನ ಬದುಕೋಕೆ ಇಷ್ಟ. ಜನ ಸೇವೆ ಮಾಡಲು ಹೆಚ್ಚು ವರ್ಷ ಬದುಕಬೇಕು ಅಂತ ಆಸೆ ಇದೆ ಎಂದಿದ್ದಾರೆ.

ನನಗೆ ಈಗಾಗಲೇ 76 ವರ್ಷ ವಯಸ್ಸಾಯಿತು. ಇನ್ನು ಎಷ್ಟು ವರ್ಷ ಬದುಕುತ್ತೀನೋ ಗೊತ್ತಿಲ್ಲ. ಡಯಾಬಿಟಿಸ್ ಬಂದಿದೆ. ಅದು 10 ವರ್ಷ ಆಯಸ್ಸು ಕಡಿಮೆ ಮಾಡುತ್ತಂತೆ. ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡಿದರೆ ಆರೋಗ್ಯ ವೃದ್ಧಿ ಆಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಇವೆಲ್ಲ ಶುರು ಮಾಡಬೇಕು. ಕರೊನಾ ಬಂದ ಮೇಲೆ ಜನರಿಗೆ ತೊಂದರೆ ಆಗಿದೆ. ಆದರೆ ಆಸ್ಪತ್ರೆಯವರಿಗೆ ಆರ್ಥಿಕವಾಗಿ ಒಳ್ಳೆಯದಾಗಿದೆ. ಆಸ್ಪತ್ರೆ ಮಾರಲು ಹೊರಟಿದ್ದವರೆಲ್ಲ ಉಳಿಸಿಕೊಳ್ಳುತ್ತೇವೆ ಅನ್ನುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹಾಸ್ಯಚಟಾಕಿ ಹಾರಿಸಿದರು.

Exit mobile version