Site icon PowerTV

ಗುಂಬಜ್ ಮಾದರಿ ಗೋಪುರ ನಿರ್ಮಾಣಕ್ಕೆ ಮುತಾಲಿಕ್ ಕಿಡಿ

ಚಿಕ್ಕಮಗಳೂರು : ಕೇಸರಿ ಬಣ್ಣ ಹಿಂದೂ ಸಂಘಟನೆಗಳದಲ್ಲ, ಕೇಸರಿ ಬಣ್ಣ ತ್ಯಾಗದ ಪ್ರತೀಕ ಅತ್ಯಂತ ಶ್ರೇಷ್ಠವಾದದ್ದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಮುತಾಲಿಕ್ ಅಭಿಪ್ರಾಯಪಟ್ಟರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆಡೆ ತನ್ವೀರ್ ಸೇಠ್ ಪ್ರತಿಮೆ ನಿರ್ಮಾಣದ ಹೇಳಿಕೆ ಮತ್ತೊಂದೆಡೆ ಬಸ್ ನಿಲ್ದಾಣಗಳಲ್ಲಿ ಗುಂಬಜ್ ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಅಂಥವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

ಇನ್ನು, ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸ್ವಾಗತ, ಕೇಸರಿ ಬಣ್ಣ ಹಿಂದೂ ಸಂಘಟನೆಗಳದಲ್ಲ, ಕೇಸರಿ ಬಣ್ಣ ತ್ಯಾಗದ ಪ್ರತೀಕ ಅತ್ಯಂತ ಶ್ರೇಷ್ಠವಾದದ್ದು. ಇದನ್ನು ವಿರೋಧಿಸುವ ಕಾಂಗ್ರೆಸ್, ಬುದ್ಧಿಜೀವಿಗಳು ಮೂರ್ಖರು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

Exit mobile version