Site icon PowerTV

ಜಡೇಜಾ ಜತೆ ಹೋಗಿ ನಾಮಪತ್ರ ಸಲ್ಲಿಸಿದ ರಿವಾಬಾ ಜಡೇಜಾ

ಗುಜರಾತ್​​: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಇಂದು ಗುಜರಾತ್‌ನ ಜಾಮ್‌ನಗರ ಉತ್ತರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಗುಜರಾತ್‌ನ ವಿಧಾನಸಭಾ ಚುನಾವಣೆ ಮೊದಲ ಹಂತದ ವಿಧಾನಸಭೆ ಚುನಾವಣೆ ಡಿಸೆಂಬರ್ 1 ರಂದು ಹಾಗೂ ಎರಡನೇ ಹಂತದ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ

ಗುಜರಾತ್​ನ ಜಾಮನಗರ ಕ್ಷೇತ್ರದಿಂದ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್​ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ರವೀಂದ್ರ ಜಡೇಜಾ ಜತೆ ಹೋಗಿ ಪತ್ನಿ ನಾಮಪತ್ರ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಜಡೇಜಾ ಅವರು ನಾಮಪತ್ರ ಸಲ್ಲಿಸುವ ಮೊದಲು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

Exit mobile version