Site icon PowerTV

ಮಹಾ ಕಾಲಭೈರವೇಶ್ವರದಿಂದ ನೇರವಾಗಿ ಇಡಿ ವಿಚಾರಣೆಗೆ ಹಾಜರಾದ ಡಿಕೆಶಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಕೇಸ್​ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್​ ಅವರು ಇಂದು ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಗಳ ವಿಚಾರಣೆಗೆ ಹಾಜರಾಗಿದ್ದಾರೆ.

ನ್ಯಾಷನಲ್​ ಹೆರಾಲ್ಡ್, ಯಂಗ್​ ಇಂಡಿಯಾ ಪಂಡಿಂಗ್​ಗೆ ಅಕ್ರಮ ಹಣ ವರ್ಗಾವಣೆಯನ್ನ ಡಿಕೆ ಶಿವಕುಮಾರ್​ ಅವರು ಎದರಿಸುತ್ತಿದ್ದಾರೆ. ಈ ಕೇಸ್​ಗೆ ಸಂಬಂಧಿಸಿದಂತೆ ಈಗಾಗಲೇ ಡಿ.ಕೆ ಶಿವಕುಮಾರ್​ ಅವರನ್ನ ಎರಡು ಬಾರಿ ವಿಚಾರಣೆ ನಡೆಸಿದ್ದು, ಇಂದು ಕೂಡ ಡಿಕೆಶಿ ನವದೆಹಲಿಯಲ್ಲಿರುವ ಇಡಿ ಕೆಚೇರಿಗೆ ಹಾಜರಾಗಿದ್ದಾರೆ.

ಈ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಡಿಕೆಶಿ, ನಾನು ವಿಚಾರಣೆ ಎದುರಿಸಲು 3 ವಾರಗಳ ಸಮಯ ಕೇಳಿದ್ದೆ, ಆದರೆ ಅವರು ನನ್ನನ್ನು ಇಂದು ಬರಲು ಹೇಳಿದರು. ನಾನಿದ್ದ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾ ಕಾಲಭೈರವೇಶ್ವರ ದೇವಸ್ಥಾನದಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಅದು ಏನೇ ಇರಲಿ, ನಾವು ಸಮನ್ಸ್ ಮತ್ತು ಇಡಿ ಸಂಸ್ಥೆಯ ತನಿಖೆಯನ್ನ ಗೌರವಿಸುತ್ತೇವೆ. ಅವರಿಗೆಲ್ಲ ಉತ್ತರ ನೀಡುತ್ತೇನೆ.

Exit mobile version