Site icon PowerTV

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚೋಕೆ ನಾಳೆನೇ ಡೆಡ್ಲೈನ್

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ನವೆಂಬರ್15 ರೊಳಗೆ ಗುಂಡಿ ಮುಚ್ಚುವಂತೆ ಇಂಜಿನಿಯರ್ಗಳಿಗೆ ಪಾಲಿಕೆ ಕಮಿಷನರ್ ಗಡುವು ನೀಡಿದೆ.

ನಗರದಲ್ಲಿ ನಾಳೆಯಿಂದಲೇ ಸಾವಿನ ಗುಂಡಿಗಳಿಂದ ಮುಕ್ತಿ ಸಿಗುತ್ತಾ..? ರಾಜಧಾನಿ ಬೆಂಗಳೂರಿನಲ್ಲಿ ನಾಳೆಯಿಂದ ಗುಂಡಿಗಳೇ ಕಾಣಲ್ವಾ. ನವೆಂಬರ್15 ರೊಳಗೆ ಗುಂಡಿ ಮುಚ್ಚುವಂತೆ ಇಂಜಿನಿಯರ್ಗಳಿಗೆ ಪಾಲಿಕೆ ಕಮಿಷನರ್ ಗಡುವು ನೀಡಿದ್ದಾರೆ.

ಇನ್ನು, ಆದೇಶ ಪಾಲನೆ ಮಾಡದ ಎಂಜಿನಿಯರ್ ಗಳನ್ನ ಅಮಾನತು ಮಾಡ್ತಾರಾ ಕಮಿಷನರ್..? ನವೆಂಬರ್ 15 ರೊಳಗೆ ಗುಂಡಿ ಮುಚ್ಚಿಲ್ಲ ಅಂದರೆ ಅಮಾನತು ಎಚ್ಚರಿಕೆ ನೀಡಿರೋ ತುಷಾರ್ ಗಿರಿನಾಥ್. ಈ ಬಾರಿ ಮಳೆಗಾಲದಲ್ಲಿ ನಗರದಲ್ಲಿ ಕಾಣಿಸಿಕೊಂಡ ಗುಂಡಿಗಳ ಸಂಖ್ಯೆ 32011, ಇಲ್ಲಿಯವರೆಗೆ ಮುಚ್ಚಲಾಗಿರುವ ಸುಮಾರು ಗುಂಡಿಗಳ ಸಂಖ್ಯೆ 30 ಸಾವಿರ ದಾಟಿದೆ. ಇನ್ನೂ ಸುಮಾರು 2 ಸಾವಿರ ಹೆಚ್ಚು ಗುಂಡಿ ಬಾಕಿ ಇದ್ದು, ನಾಳೆಯೊಳಗೆ ಬಾಕಿ ಗುಂಡಿಗಳನ್ನ ಮುಚ್ಚುತ್ತಾರಾ ಪಾಲಿಕೆ ಎಂದು ಕಾದುನೋಡಬೇಕು.

Exit mobile version