Site icon PowerTV

ಟಿಪ್ಪು ಕುರಿತ ವಿವಾದಿತ ಪುಸ್ತಕ ಬಿಡುಗಡೆ..!

ಮೈಸೂರು: ಇಂದು ಮೈಸೂರಿನಲ್ಲಿ ಟಿಪ್ಪು ಕುರಿತ ವಿವಾದಿತ ಪುಸ್ತಕ ಬಿಡುಗಡೆ. ಇಂದು ಸಂಜೆ ಟಿಪ್ಪು ನಿಜ ಕನಸು ನಾಟಕ ಕೃತಿ ಲೋಕಾರ್ಪಣೆ. ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿರುವ ಕೃತಿ.

ಸಂಜೆ 4ಕ್ಕೆ ರಂಗಾಯಣದ ವನರಂಗದಲ್ಲಿ ಬಿಡುಗಡೆ. ಹಿರಿಯ ಕಾದಂಬರಿಕಾರ ಡಾ. ಎಸ್ ಎಲ್ ಭೈರಪ್ಪರಿಂದ ಬಿಡುಗಡೆ. ಕೃತಿ ಬಿಡುಗಡೆ ಬಳಿಕ ನಾಟಕ ಪ್ರದರ್ಶನಕ್ಕೂ ಸಜ್ಜಾಗಿರುವ ರಂಗಾಯಣ ತಂಡ. ಟಿಪ್ಪು ಕುರಿತ ಕೆಲ ಆಯ್ದ ಭಾಗಗಳ ಕುರಿತು ವಾಸ್ತವ ತೋರಿಸಲಾಗುವುದು ಎಂದಿರುವ ಲೇಖಕ ಅಡ್ಡಂಡ ಕಾರ್ಪ್ಪ.

ಅಡ್ಡಂಡ ಕಾರ್ಯಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುವ ಮುಸ್ಲಿಂ ನಾಯಕರು, ಶಾಸಕ ತನ್ವಿರ್ ಸೇಠ್. ಪುಸ್ತಕ ಹಾಗೂ ನಾಟಕ ಪ್ರದರ್ಶನ ತಡೆಗೆ ನ್ಯಾಯಾಲಯದ ಮೊರೆ ಹೋಗಲಿರುವ ಶಾಸಕ ತನ್ವಿರ್ ಸೇಠ್. ಇಂದಿನ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಸಾಮಾಜಿಕ ಕಾರ್ಯಕರ್ತ ವಾದಿರಾಜ್, ಲೇಖಕ ರೋಹಿತ್ ಚಕ್ರತೀರ್ಥ ಭಾಗಿ ಸಾಧ್ಯತೆಯಿದೆ.

Exit mobile version