Site icon PowerTV

ತಿಮ್ಮಯ್ಯ ಅಂಡ್​ ತಿಮ್ಮಯ್ಯ ನೆನಪಿನ ಅಲೆಯಲ್ಲಿ ನಗೆಗುಳಿಗೆ

ತಿಮ್ಮಯ್ಯ ಅಂಡ್​ ತಿಮ್ಮಯ್ಯ ಚಿತ್ರದಲ್ಲಿ ಜಬರ್ದಸ್ತ್ ಜೋಡಿ ಅನಂತ್​ನಾಗ್​ ಹಾಗೂ ದಿಗಂತ್​ ಒಂದಾಗಿದ್ದಾರೆ. ತಾತ ಮೊಮ್ಮಗನ ಪಾತ್ರದಲ್ಲಿ ಮಸ್ತ್​ ಕಾಮಿಡಿಯ ಕಥೆ ಜೊತೆ ಬರ್ತಿದ್ದಾರೆ. ತರಲೆ, ತಮಾಷೆ ಮಾಡ್ತಾ, ಒಬ್ಬರಿಗೊಬ್ರು ಕಾಲೆಳಿತಾ ಮಸ್ತ್​ ಮನರಂಜನೆ ನೀಡೋ ಭರವಸೆ ಮೂಡಿಸಿದ್ದಾರೆ. ತಾತ ಮೊಮ್ಮಗನ ಮ್ಯಾಟ್ರೇನು ಅನ್ನೋದನ್ನು ನಾವ್​ ಹೇಳ್ತೀವಿ ನೀವೇ ಓದಿ.

ವೈಬ್ರೆಂಟ್​​ ವಾಯ್ಸ್​ ಇಟ್ಕೊಂಡು ಇಂದಿಗೂ ಪೋಷಕ ನಟನಾಗಿ ಮಿಂಚ್ತಿರುವ ನಟ ಅನಂತ್​ನಾಗ್​​. ಅವ್ರ ಕಂಚಿನ ದನಿ ಎಂತವ್ರ ಎದೆಯಲ್ಲೂ ಸಂಚಲನ ಮೂಡಿಸುತ್ತೆ. ಅವ್ರಿದ್ರೆ ಸಿನಿಮಾ ಸಕ್ಸಸ್​​ ಅನ್ನೋ ಅದೃಷ್ಠದ ಮಾತುಗಳ ಸಹ ಇವೆ. ಇದ್ರ ನಡುವೆ ದೂದ್​ ಪೇಡ ದಿಗಂತ್​​​​​​​​ ಜತೆ ತಿಮ್ಮಯ್ಯ ಅಂಡ್​ ತಿಮ್ಮಯ್ಯ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಅನಂತ್‌ ನಾಗ್‌, ದಿಗಂತ್‌ ತಾತ ಮೊಮ್ಮಗನಾಗಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ದೇವ್ ಸನ್ ಆಫ್‌ ಮುದ್ದೇಗೌಡ, ಪಂಚರಂಗಿ, ಗಾಳಿಪಟ, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನಂತ್‌ ನಾಗ್‌ ಜತೆ ದಿಗಂತ್‌ ನಟಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗಿದೆ.

ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ ತಾತ ಮತ್ತು ಮೊಮ್ಮಗನ ಕಥೆ. ಇವರಿಬ್ಬರೂ ಮೂವತ್ತು ವರ್ಷದಿಂದ ಭೇಟಿ ಆಗಿರುವುದಿಲ್ಲ. ಆದರೆ ಭೇಟಿಯಾದ ನಂತ್ರ,  ಇಬ್ಬರು ಮೂರು ತಿಂಗಳು ಒಟ್ಟಿಗೆ ಇರಬೇಕೆಂದು ಒಪ್ಪಂದವಾಗುತ್ತದೆ. ಹೀಗೆ ಜತೆಯಲ್ಲಿದ್ದಾಗ, ಇವರ ನಡುವೆ ಆಗುವ ಜಗಳ, ತರಲೆ, ತಮಾಷೆಗಳೇ ಚಿತ್ರದ ಜೀವಾಳವಾಗಿದೆ. ಸಿನಿಮಾದಲ್ಲಿ ಐಂದ್ರಿತಾ ರೇ, ಪ್ರಕಾಶ್‌ ತುಮ್ಮಿನಾಡು,ಮಿಮಿಕ್ರಿ ಗೋಪಿ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ.ಈ ಚಿತ್ರಕ್ಕೆ ಸಂಜಯ್‌ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ. ಜಯಂತ್‌ ಕಾಯ್ಕಿಣಿ, ಪ್ರಮೋದ್‌ ಮರವಂತೆ ಸಾಹಿತ್ಯ ಬರೆದಿದ್ದಾರೆ. ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದು, ರಾಜೇಶ್ ಶರ್ಮಾ ಬಂಡವಾಳ ಹೂಡಿದ್ದಾರೆ. ಹಲವು ವರ್ಷಗಳ ನಂತ್ರ ಭೇಟಿಯಾದ ತಾತ ಮೊಮ್ಮಗನ ಕಥೆಯನ್ನು ನಕ್ಕು ನಗಿಸುವಂತೆ ತೋರಿಸೋ ಪ್ರಯತ್ನ ಮಾಡಲಾಗಿದೆ. ಸದ್ಯದಲ್ಲೆ ತೆರೆಗೆ ಬರೋಕೆ ಸಜ್ಜಾಗಿರೋ ಚಿತ್ರಕ್ಕೆ ಪ್ರೇಕ್ಷಕರ ಮಹಾಪ್ರಭುಗಳು ಏನಂತಾರೆ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

Exit mobile version