Site icon PowerTV

ಶಾಸಕ ಸಿಟಿ ರವಿ ವಿರುದ್ಧ ಸಿಡಿದೆದ್ದ ಪ್ರಮೋದ್ ಮುತಾಲಿಕ್

ಚಿಕ್ಕಮಗಳೂರು:ರಾಮನ ಜನ್ಮಸ್ಥಾನಕ್ಕಾಗಿ ಹೋರಾಟ ಐನೂರು ವರ್ಷ ಬೇಕಾಯಿತು, ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500 ವರ್ಷ ತೆಗೆದು ಕೊಂಡು ಹೋಗುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಸಿ‌.ಟಿ ರವಿ ಅವರೇ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರ ಇರುವಾಗಲೇ ದತ್ತಪೀಠದ ವಿವಾದವನ್ನು ಪರಿಹಾರ ಮಾಡಬಹುದು. ಹಿಂದೂ ಅರ್ಚಕರನ್ನ ನೇಮಿಸಿ ಪರಿಹಾರ ಮಾಡಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಹೇಳಿದ 24 ಗಂಟೆಯ ಒಳಗಡೆ ಅರ್ಚಕರನ ನೇಮಿಸಬಹುದಿತ್ತು.ಅರ್ಚಕರನ್ನ ನೇಮಿಸಿ ಪೂಜೆ ಪ್ರಾರಂಭ ಮಾಡಿದ್ರೆ ನಿಮ್ಮಪ್ಪನ ಗಂಟು ಏನ್ ಹೋಗುತ್ತಿತ್ತು ಸಿ.ಟಿ ರವಿಯವರೇ.ಸ್ಟೇ ತರ್ತಾರೆ ಅಂತಾ ಭಾರಿ ದೊಡ್ಡ ದೊಡ್ಡ ಮಾತಾನಾಡ್ತೀರಿ.
ಸುಡುಗಾಡು ರೀ, ಯಾರ್ ಸ್ಟೇ ತರ್ತಾರೆ..? ಮುಸ್ಲಿಮರ ಜೊತೆ ಕುಳಿತುಕೊಂಡು ಸೌಹಾರ್ದತೆಯಿಂದ ಬಗೆಹರಿಸಲು ಆಗೋದಿಲ್ವಾ.?
ಪರಿಹರಿಸಲು ಗಟ್ಸ್ ಬೇಕಾಗಿದೆ, ಇಚ್ಛಾಶಕ್ತಿ ಬೇಕಾಗಿದೆ.

ಅದಿಲ್ಲದ ಪರಿಣಾಮದಿಂದ ರಾಜಕೀಯ ನಾಟಕ ಆಡುತ್ತಿದ್ದೀರಿ, ಆದರೆ ನಾವು ನಮ್ಮ ಕೊನೆ ಉಸಿರು ಇರೋವರೆಗೂ ದತ್ತಪೀಠಕ್ಕಾಗಿ ಹೋರಾಡುತ್ತೇವೆ. ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ವಿರುದ್ಜ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

Exit mobile version