Site icon PowerTV

ಪವನ್​ ಕಲ್ಯಾಣ್​ ವಿರುದ್ಧ FIR ದಾಖಲು

ಅಜಾಗರೂಕತೆಯ ಕಾರು ಚಾಲನೆ ಮತ್ತು ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪದಲ್ಲಿ ನಟ, ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪವನ್ ಕಲ್ಯಾಣ್, ವೇಗವಾಗಿ ಸಾಗುತ್ತಿದ್ದ ಕಾರಿನ ರೂಫ್‌ನಲ್ಲಿ ಕುಳಿತು ಸಾಗುತ್ತಿದ್ದ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಪವನ್ ಕಲ್ಯಾಣ್ ಹಾಗೂ ಅವರ ಜತೆಗಾರರ ಅಜಾಗರೂಕತೆಯ ಚಾಲನೆಯ ಕಾರಣದಿಂದ ತಮ್ಮ ಬೈಕ್‌ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಗಿ ಪಿ ಶಿವಕುಮಾರ್ ಎಂಬುವವರು ದೂರು ಸಲ್ಲಿಸಿದ್ದರು.

ನಟ- ರಾಜಕಾರಣಿ ಪವನ್ ಕಲ್ಯಾಣ್, ಅವರ ಚಾಲಕ ಮತ್ತು ಅಪಾಯಕಾರಿ ಸ್ಟಂಟ್‌ನಲ್ಲಿ ಭಾಗಿಯಾದ ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಪವನ್ ಕಲ್ಯಾಣ್ ಅವರು ಕಾರಿನ ಮೇಲೆ ಕುಳಿತಿದ್ದರೂ ಕೂಡ, ಚಾಲಕ ಅಜಾಗರೂಕತೆ ಹಾಗೂ ಅತಿ ವೇಗದಲ್ಲಿ ನಿರ್ಲಕ್ಷ್ಯದಿಂದ ಚಾಲನೆ ನಡೆಸುತ್ತಿದ್ದರು. ಉಳಿದವರು ಅವರನ್ನೇ ಹಿಂಬಾಲಿಸುತ್ತಿದ್ದರು.

Exit mobile version