Site icon PowerTV

ಮಲ್ಲೇಶ್ವರಂನಲ್ಲಿ ಬಸವನಗುಡಿ ಮಾದರಿಯಲ್ಲಿ ಕಡಲೆಕಾಯಿ ಪರಿಷೆ..!

ಬೆಂಗಳೂರು: ಮಲ್ಲೇಶ್ವರಂನಲ್ಲಿ ಬಸವನಗುಡಿ ಮಾದರಿಯಲ್ಲಿ ಕಡಲೆಕಾಯಿ ಪರಿಷೆ. ಮಲ್ಲೇಶ್ವರಂ 8ನೇ ಕ್ರಾಸ್​ನಿಂದ 16 ನೇ ಕ್ರಾಸ್ ರಸ್ತೆಯುದ್ದಕ್ಕೂ ಕಡಲೆಕಾಯಿ ವ್ಯಾಪಾರ.

ಸುಮಾರು 400ಕ್ಕೂ ಹೆಚ್ಚು ಅಂಗಡಿ ಮಳಿಗೆ ಹಾಕಲು ಅವಕಾಶ ನಿಡಲಾಗಿದ್ದು, ನಾಳೆವರೆಗೆ ನಡೆಯಲಿವ ಮಲ್ಲೇಶ್ವರಂ ಪರಿಷೆ.
ವಿವಿಧ ತಳಿಗಳ ಕಡಲೆಕಾಯಿ,ತಿಂಡಿ–ತಿನಿಸುಗಳುಸಿಲಿಕಾನ್ ಸಿಟಿ ಜನರನ್ನು ಕೈ ಬೀಸಿ ಕರೆಯುತ್ತಿದೆ. ಪರಿಷೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಬೇರೆ ರಾಜ್ಯಗಳ ಕಡಲೆಕಾಯಿ ಮಾರಾಟವಾಗಲಿದೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಭಾಗಗಳಿಂದ ಕಡಲೆಕಾಯಿ ತಂದು ಮಾರಾಟ ಮಾಡಲಾಗುತ್ತಿದೆ. ಕೆಂಪುಕಡಲೆ ಸೇರಿದಂತೆ ಎರಡು, ಮೂರು ಹಾಗೂ ನಾಲ್ಕು ಬೀಜದ ನಾಟಿ ಮತ್ತು ಹೈಬ್ರಿಡ್ ತಳಿಗಳ ಕಾಯಿಗಳ ಮಾರಾಟ ಮಾಡಲಾಗುತ್ತದೆ.
ಸೇರಿಗೆ ರೂ.30 ಹಾಗೂ ರೂ.40 ರಂತೆ ಮಾರಾಟ ಮಾಡಲಾಗುತ್ತದೆ.

Exit mobile version