Site icon PowerTV

ಕಲಬುರಗಿಯಲ್ಲಿ ತಾರಕ್ಕಕೇರಿದ ಪೋಸ್ಟರ್ ವಿವಾದ

ಕಲಬುರಗಿ : ಹೈವೋಲ್ಟೆಜ್ ಕ್ಷೇತ್ರವೆಂದೆ ಕರೆಯಲ್ಪಡುವ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದಾರೆಂಬ ಪೋಸ್ಟರ್ ವಿವಾದ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಪೋಸ್ಟರ್ ಅಭಿಯಾನಕ್ಕೆ ಕೆಂಡವಾದ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಒಬ್ಬರನ್ನೂ ಕ್ಷೇತ್ರ ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಓಡಾಡಲು ಬಿಡುವುದಿಲ್ಲ ಅಂತಾ ಹೇಳಿದ್ದರು.

ಇನ್ನು, ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಟಕ್ಕರ್ ಕೊಡಲು ಹೋಗಿ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್, ನೀವೇ ಶೂಟ್ ಮಾಡಿ.. ಇಲ್ಲಾಂದ್ರೆ ನಾವೇ ನಿಮ್ಮನ್ನ ಶೂಟ್ ಮಾಡ್ತೀವಿ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದರು‌. ಇದೀಗ ಬಿಜೆಪಿ ಮುಖಂಡನ ಹೇಳಿಕೆಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಇನ್ನೂ ನಾಳೆ ಸೇಡಂ ಪಟ್ಟಣದಲ್ಲಿ ಸಹಕಾರ ಸಪ್ತಾಹ ದಿನದ ಅಂಗವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಕಲಬುರಗಿಗೆ ಆಗಮಿಸುತ್ತಿದ್ದು, ಮಣಿಕಂಠ್ ರಾಠೋಡ್‌ರನ್ನ ಬಂಧಿಸದಿದ್ದರೇ, ಸಿಎಂರನ್ನ ಕಲಬುರಗಿಗೆ ಬರಲು ಬಿಡುವುದಿಲ್ಲ ಮತ್ತು ಸಿಎಂಗೆ ಕಪ್ಪುಪಟ್ಟಿ ಪ್ರದರ್ಶನ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಬಿಜೆಪಿಯವರನ್ನ ಓಡಾಡಲು ಬಿಡುವುದಿಲ್ಲ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಕೇಸರಿಪಾಳಯ ಸಿಡಿದೆದ್ದಿದೆ.

ಅದೆನೇ ಇರಲಿ ಹೈವೋಲ್ಟೆಜ್ ಕ್ಷೇತ್ರ ಚಿತ್ತಾಪುರದಲ್ಲಿ ಪೋಸ್ಟರ್ ವಿವಾದ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಇತ್ತ ಮಣಿಕಂಠ್ ರಾಠೋಡ್‌ರ ಕಾಂಟ್ರೋವರ್ಸಿ ಸ್ಟೇಟ್‌ಮೆಂಟ್ ವಿವಾದ ನಾಳೆ ಸಿಎಂ ಬೊಮ್ಮಾಯಿಗೆ ತಟ್ಟುತ್ತಾ ಅಥಾವ ಮಣಿಕಂಠ್‌ರನ್ನ ಬಂಧಿಸಲು ಆದೇಶ ನೀಡುತ್ತಾರ ಅನ್ನೊದು ನೋಡಬೇಕು.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

Exit mobile version