Site icon PowerTV

ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ..!

ಚಿಕ್ಕಮಗಳೂರು:ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ. ಕಳೆದ ಏಳು ದಿನಗಳಿಂದ ಮಾಲೆ ಧರಿಸಿ ವ್ರತದಲ್ಲಿರುವ ದತ್ತಮಾಲಾಧಾರಿಗಳು.

ಇಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆಯಲಿರುವ ದತ್ತಭಕ್ತರು.  9 ಗಂಟೆಗೆ ಚಿಕ್ಕಮಗಳೂರು ನಗರದ ಶಂಕರಮಠ ಮುಂಭಾಗದಲ್ಲಿ ಬಹಿರಂಗ ಸಮಾವೇಶ.  ಧಾರ್ಮಿಕ ಸಭೆ ಬಳಿಕ ದತ್ತಮಾಲಾಧಾರಿಗಳಿಂದ ನಗರದಲ್ಲಿ ಶೋಭಾಯಾತ್ರೆ, ಶೋಭಾಯಾತ್ರೆ ಬಳಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲ್ಲಿದ್ದಾರೆ. ದತ್ತಮಾಲಾ ಅಭಿಯಾನದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್.

ದತ್ತಮಾಲಾ ಅಭಿಯಾನ ಹಿನ್ನಲೆಯಲ್ಲಿ ಪ್ರವಾಸಗರಿಗೆ ನಿರ್ಬಂಧ ಹೇರಿದ್ದು, ಇಂದು ಬೆಳಿಗ್ಗೆ 6 ಗಂಟೆಯಿಂದ ಸೋಮವಾರ 10 ಗಂಟೆವರೆಗೆ ಗಿರಿಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ.

Exit mobile version