Site icon PowerTV

ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ; ಸಚಿವ ಶ್ರೀರಾಮುಲು

ಕೊಪ್ಪಳ; ಚುನಾವಣೆ ಗಿಮಿಕ್ ಗಾಗಿ ಸಿದ್ದರಾಮಯ್ಯ ಅವರು ಕೋಲಾರದಿಂದ ಯಾತ್ರೆ ಮಾಡ್ತಾಯಿದ್ದಾರೆ. ರಾಜಕಿಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಸಚಿವ ಶ್ರಿರಾಮುಲು ವಾಗ್ದಾಳಿ ನಡೆಸಿದ್ದಾರೆ.

ಇಂದು ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಅವರು ಪ್ರವಾಸ ಕೈಗೊಂಡ ಹಿನ್ನಲೆಯಲ್ಲಿ ಈ ಬಗ್ಗೆ ಕೊಪ್ಪಳದ ಗಂಗಾವತಿಯ ಪಂಪಸಾಗರದಲ್ಲಿ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ಅವರನ್ನ ಬಾದಾಮಿ ಜನರು ಯಾವ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನ ಕ್ಷಮಿಸಲ್ಲ. ಸಿದ್ದರಾಮಯ್ಯ ಅವರು ಕೊನೆದಾಗಿ ಸ್ಪರ್ಧೆ ಮಾಡೋದು ವರುಣಾದಲ್ಲೆ, ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಎಂದು ಶ್ರೀ ರಾಮುಲೂ ಭವಿಷ್ಯ ನುಡಿದಿದ್ದಾರೆ.

ಇನ್ನು ಜನರ ಗಮನವನ್ನ ಬೇರೆ ಕಡೆ ಗಮನ ಹರಿಸಲು ಕೋಲಾರಕ್ಕೆ ಸಿದ್ದರಾಮಯ್ಯ ಅವರು ಪ್ರವಾಸ ಮಾಡಿದ್ದಾರೆ. ಕೋಲಾರದಿಂದ ಡಿಮ್ಯಾಂಡ್ ಕ್ರೀಯೇಟ್ ಮಾಡ್ತಿದ್ದಾರೆ. ರಾಜಕಿಯ ಪುನರ್ಜನ್ಮ ನೀಡಿದ ಬಾದಾಮಿ ಜನರಿಗೆ ಸಿದ್ದರಾಮಯ್ಯ ಕೈ ಕೊಡ್ತಾಯಿದ್ದಾರೆ. ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನ ಕಣಕ್ಕಿಳಿಸ್ತಿವಿ ಎಂದು ಹೇಳಿದರು.

ಇನ್ನು ವರುಣಾದಿಂದ ಕೂಡಾ ಅವರನ್ನ ಸೋಲಿಸ್ಲಿಕ್ಕೆ ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಾರೆ. ಮಾಜಿ ಸಿ ಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಅವರ ಪಕ್ಷದ ಡಿ ಕೆ ಶಿವುಕುಮಾರ್ ಭಯ ಹೆಚ್ಚಾಗಿದೆ. ಅವರು ಎಲ್ಲೆ ಚುನಾವಣೆಗೆ ನಿಂತರು ಡಿಕೆಶಿ ಭಯ ಕಾಡ್ತಿದೆ. ಡಿಕೆಶಿ ಪ್ರಭಾವ ಇಲ್ಲದ ಕಡೆಯಲ್ಲಿ ಚುನಾವಣೆ ನಿಲ್ಲಲು ಹುಡುಕಾಟ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅಂತವರಲ್ಲ ತುಂಬಾ ಒಳ್ಳೆಯವರು ಎಂದು ಶ್ರೀರಾಮುಲು ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು. ಸಿದ್ದರಾಮಯ್ಯ ಯಾವುದೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು ಅತ್ಯಂತ ಕೀಳಾಗಿ ಸೋಲೋದು ಗ್ಯಾರಂಟಿ ಎಂದು ಶ್ರೀರಾಮುಲು ಹೇಳಿದರು.

Exit mobile version