Site icon PowerTV

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಹೆಣ್ಣು ಹುಲಿ ಬಲಿ.!

ಮೈಸೂರು: ಕಾಡು ಹಂದಿ ಕಾಟ ತಪ್ಪಿಸಲು ಹಾಕಿದ್ದ ಉರುಳಿಗೆ ಹುಲಿ ಬಲಿಯಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ‌‌ ಅರಣ್ಯದ ಸ್ಥಾನ ಅಂತರಸಂತೆ ವಲಯದಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ‌‌ ಅರಣ್ಯದ ಸಫಾರಿ ಪ್ರಮುಖವಾಗಿದೆ. ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಹೆಣ್ಣು ಹುಲಿಯ ಸಿಲುಕಿ ಮೃತವಾಗಿದೆ.

ಸಾವೀಗಿಡಾದ ಹೆಣ್ಣು ಹುಲಿಯನ್ನ ಸಫಾರಿ ವಲಯದಲ್ಲಿ ನಾಯಂಜಿ ಕಟ್ಟೆ ಪೀಮೇಲ್‌ ಎಂದು ಕರೆಯಲಾಗುತ್ತಿತ್ತು. ಆರು ತಿಂಗಳ ಅಂತರದಲ್ಲಿ ಒಟ್ಟು ಮೂರು ಹುಲಿ ಸಾವೀಗಿಡಾಗಿದ್ದು, 3 ಮರಿಗಳನ್ನ ಬಿಟ್ಟು ನಾಯಂಜಿ ಕಟ್ಟೆ ಪೀಮೇಲ್‌ ಸಾವೀಗಿಡಾಗಿದೆ.

ತಾಯಿ ಹುಲಿ ಸಾವನ್ನಪ್ಪಿದ ಸ್ಥಳದ ಸುತ್ತಮುತ್ತ 30 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಅನಾಥವಾದ ಹುಲಿಮರಿಗಳನ್ನ ರಕ್ಷಣೆ ಮಾಡಿ, ಮೂರು ಮರಿಗಳಿಗೆ ಸೂಕ್ತ-ಸುರಕ್ಷಿತ ಪುನರ್ವಸತಿ ಕಲ್ಪಿಸುವಂತೆ ಪ್ರಾಣಿಪ್ರಿಯರು ಒತ್ತಾಯ ಮಾಡಿದ್ದಾರೆ. ಸದ್ಯ ನಾಪತ್ತೆಯಾದ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆ ಶೋಧಕಾರ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ.

Exit mobile version