Site icon PowerTV

46ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕ ಉಪೇಂದ್ರ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ನಟಿ, ಮಾಡೆಲ್ ಪ್ರಿಯಾಂಕ ಉಪೇಂದ್ರ ಅವರಿಗೆ ಇಂದು 46 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸ್ಯಾಂಡಲ್​​ವುಡ್​ನಲ್ಲಿ ಟಾಪ್ ನಟಿಯಾಗಿ ಮಿಂಚಿದ ಪ್ರಿಯಾಂಕ ಅವರು ಬಾಲಿವುಡ್​ನಲ್ಲೂ ಮಿಂಚಿದ್ದರು. ನಾರ್ತ್ ಸಿನಿಮಾಗಳಲ್ಲಿ ಮಿಂಚಿದಾಗ ಪ್ರಿಯಾಂಕ ಅವರಿಗೆ ಸೌತ್ ಸಿನಿ ಇಂಡಸ್ಟ್ರಿಗಳಿಂದ ಆಫರ್ ಬಂತು. ನಟಿ ತೆಲುಗು, ಕನ್ನಡ, ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕೋಲ್ಕತ್ತಾದ ಕಾಲೇಜಿನಲ್ಲಿ ಕಾಮರ್ಸ್ ಪದವಿಯನ್ನು ಪಡೆಯುವ ಮುನ್ನ ನಟಿ ಅಮೆರಿಕಾದಲ್ಲಿ ಹತ್ತು ವರ್ಷ ಹಾಗೂ ಸಿಂಗಾಪುರದಲ್ಲಿ ಸುಮಾರು ಮೂರು ವರ್ಷಗಳನ್ನು ಕಳೆದಿದ್ದಾರೆ.

ನಿರ್ದೇಶಕ ಬಸು ಚಟರ್ಜಿಯವರ ಮೊದಲ ಬೆಂಗಾಲಿ ಚಲನಚಿತ್ರವಾದ ಹೋತತ್ ಬ್ರಿಷ್ಟಿನಲ್ಲಿ ಪ್ರಿಯಾಂಕ ನಟಿಸಿದರು. ಅವರೊಂದಿಗೆ ನಟಿ ಇನ್ನೂ ಎರಡು ಸಿನಿಮಾ ಮಾಡಿದ್ದರು.

Exit mobile version