Site icon PowerTV

ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಮನೆ

ಕಾರವಾರ:ಕಾರವಾರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಮನೆ. ಮನೆಯಲ್ಲಿ ಯಾರು ಇಲ್ಲದಿರುವುದರಿಂದ ತಪ್ಪಿದ ಬಾರಿ ಅನಾಹುತ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಪಟ್ಟಣದಲ್ಲಿ ನಡೆದ ಘಟನೆ ಸಂಬವಿಸಿದ್ದು,  ಅಂಕೋಲ ಪಟ್ಟಣದ ವಾಜಂತ್ರಿಕೇರಿಯಲ್ಲಿ ನಡೆದ ಅವಘಡ. ಗೋಪಿನಾಥ ಮಹಲೆಯವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ.

ತಡರಾತ್ರಿ ನಡೆದಿರುವ ಘಟನೆ, ಅಂದಾಜು 1.5 ಲಕ್ಷ ರೂ ಹಾನಿ. ಮನೆಯಿಂದ ಭಾರೀ ಪ್ರಮಾಣದ ಹೊಗೆ ಬಂದ ಹಿನ್ನಲೆ ಎಚ್ಚೆತ್ತ ಅಕ್ಕ ಪಕ್ಕದ ಮನೆಯವರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ.
ಅಂಕೋಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version