Site icon PowerTV

ವಿದ್ಯುತ್ ತಗುಲಿ ಇಬ್ಬರು ಕಾರ್ಮಿಕರ ಸಾವು

ಚಿಕ್ಕೋಡಿ : ವಿದ್ಯುತ್ ಇಲಾಖೆಯ ಲಿಂಕ್ ಲೈನ್ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಇಬ್ಬರು ಕಾರ್ಮಿಕರು ಕರೆಂಟ್ ತಗುಲಿ ಮೃತರಾದ ದುರ್ಘಟನೆ ಜರುಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಹೆಸ್ಕಾಮ್ ಕೆಲಸಕ್ಕೆ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಬಂದಿದ್ದ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಹಣಮಂತ ಹಾಲಪ್ಪ ಮಗದುಮ್(30) ಹಾಗೂ ಅಶೋಕ ಮಾಳಿ (35) ಎಂಬ ಇಬ್ಬರು ಕಾರ್ಮಿಕರು ಮೃತರಾಗಿದ್ದಾರೆ.

ವಿದ್ಯುತ್ ಕೆಲಸ ಮಾಡುವ ಮುಂಚೆ ಕೆಇಬಿಗೆ ಮಾಹಿತಿ ಇದ್ದರೂ ಸಹ ಈ ರೀತಿ ವಿದ್ಯುತ್ ಪ್ರವಹಿಸಿ ಮರಣ ಹೊಂದಿರುವುದು ನೋಡಿದರೆ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಕೆಇಬಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಇದಕ್ಕೆಲ್ಲ ನೇರ ಹೊಣೆ ವಿದ್ಯುತ್ ಇಲಾಖೆ ಅಧಿಕಾರಿಗಳೇ ಎಂದು ಸಾರ್ವಜನಿಕರು, ಕುಟುಂಬಸ್ಥರು ಮಾತನಾಡಿಕೊಳ್ಳುತ್ತಿದ್ದರು.

Exit mobile version