Site icon PowerTV

ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದಾರೆ:ಸಿಎಂ ಇಬ್ರಾಹಿಂ

ಕಲಬುರಗಿ: ಕಲಬುರಗಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನಿಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಮೋದಿಯವರು ಬಂದಿರೋದು ಜೆಡಿಎಸ್‌ಗೆ ಲಾಭವಾಗಿದೆ, ಇದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್‌ಗೆ ಒಳ್ಳೆಯದು ಎಂದು ಹೇಳಿದ್ದಾರೆ.

ನೂರು ರೂಪಾಯಿ ಲೀಟರ್ ಪೆಟ್ರೋಲ್ ಆಗಿದೆ. ದೇಶದಲ್ಲಿ ಅಷ್ಟಲಕ್ಷ್ಮೀಯರು ಹೋಗಿ ಇದೀಗ ದರಿದ್ರ ಲಕ್ಷ್ಮಿ ಉಳಿದಿದ್ದಾಳೆ. ಕೆಂಪೆಗೌಡರ ಮೂರ್ತಿ ಅನಾವರ ಸಂತೋಷ. ಆದರೆ ಅದು ಬಿಜೆಪಿ ಮಯವಾಗಿದ್ದು ಸರಿಯಲ್ಲ. ಜನಕ್ಕೆ ಮೂರ್ತಿಕ್ಕಿಂತ ರಾಜ್ಯಕ್ಕೆ ಮೋದಿ ಆರ್ಥಿಕ ಶಕ್ತಿ ಏನು ಕೊಟ್ಟಿರಿ? ರಾಜ್ಯದ ಜಿಎಸ್‌ಟಿ ಸೇರಿದಂತೆ ಯಾವ ವಿಚಾರಗಳನ್ನ ಪ್ರಸ್ತಾಪ ಮಾಡಿದ್ರಿ?ದೇವೆಗೌಡರು ಪ್ರಧಾನಿಯಾದ ಮೊದಲ ಕನ್ನಡಿಗ, ದೇವೆಗೌಡರಿಗೆ ಕರೆಯದೆ ಇರೋದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯರನ್ನ ಸಹ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ, ಬಿಜೆಪಿ ಕಟ್ಟಲು ಬಂದಿದ್ದಾರೆ ಎಮದು ಹೇಲಿದ್ದಾರೆ.

Exit mobile version