Site icon PowerTV

ಬಿಪಾಶಾ ಮಡಿಲಿಗೆ ಪುಟ್ಟ ರಾಜಕುಮಾರಿ

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗೆ ಹೆಣ್ಣು ಮಗುವಾಗಿದೆ. ಸ್ಟಾರ್‌ ದಂಪತಿ ಕೆಲವು ತಿಂಗಳ ಹಿಂದೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು.

ಇದೀಗ ಪುಟ್ಟ ರಾಜಕುಮಾರಿ ಬಿಪಾಶಾ ಮಡಿಲು ತುಂಬಿದೆ. ಇನ್ನು ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಅವರಿಗೆ ಸಿನಿ ಮಂದಿ ಸೇರಿದಂತೆ ಸ್ನೇಹಿತರು, ಸಂಬಂಧಿಕರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. 43 ನೇ ವಯಸ್ಸಿನಲ್ಲಿ, ಬಿಪಾಶಾ ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಂತರ, ಬಾಲಿವುಡ್‌ನ ಈ ಪ್ರೀತಿಯ ಜೋಡಿ ಕೂಡ ಪೋಷಕ ಕ್ಲಬ್‌ಗೆ ಸೇರಿಕೊಂಡಿದ್ದಾರೆ.

2015 ರಲ್ಲಿ ಬಿಡುಗಡೆಯಾದ ‘ಅಲೋನ್’ ಸೆಟ್‌ನಲ್ಲಿ ಬಿಪಾಶಾ ಮತ್ತು ಕರಣ್‌ ಭೇಟಿಯಾಗಿತ್ತು. ಒಟ್ಟಿಗೆ ಕೆಲಸ ಮಾಡಿದ ನಂತರ ಇಬ್ಬರು ಪ್ರೀತಿಯಲ್ಲಿ ಬೀಳುತ್ತಾರೆ. ಈ ಜೋಡಿ ಏಪ್ರಿಲ್ 30, 2016 ರಂದು ವಿವಾಹವಾದರು. 6 ವರ್ಷಗಳ ವೈವಾಹಿಕ ಜೀವನ ಪೂರ್ಣಗೊಳಿಸಿರುವ ದಂಪತಿಗಳ ಮಡಿಲಲ್ಲಿ ಸದ್ಯ ಹೆಣ್ಣು ಮಗು ಜನಿಸಿದೆ.

Exit mobile version