ಮಂಡ್ಯ:ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ರಸ್ತೆಯಲ್ಲಿ ಘಟನೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ. ಕರಪತ್ರ ಹಂಚಿಕೆ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯ.
ಚರ್ಚ್ ಬಳಿ ಮತಾಂತರಕ್ಕೆ ಒತ್ತಾಯಿಸುತ್ತಿದ್ದ ಯುವಕರ ಗುಂಪು. ಮೆಣಸಕೆರೆ ಗ್ರಾಮದ ಶಿವರಾಮನಿಗೆ ಕ್ರೈಸ್ತ ಧರ್ಮಕ್ಕೆ ಮತಾಂತವಾಗುವಂತೆ ಒತ್ತಾಯಿಸಿದ ಯುವಕರ ಗುಂಪು. ಮತಾಂತರಕ್ಕೆ ಯತ್ನಿಸಿದ ಯುವಕರನ್ನ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು.
ಕುಮಾರ್ ನಾಯಕ್, ಸಮಂತ್, ವಿಜಯ್ ಗೌಡ, ಹೇಮಂತ್ ಕುಮಾರ್ ಸಂದೀಪ್ ಬಂಧಿತರು. ಐವರು ಯುವಕರ ವಿರುದ್ದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಮತಾಂತರಕ್ಕೆ ಯತ್ನಿಸಿದ ಯುವಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ. ಐವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು.
ವಿಚಾರಣೆ ವೇಳೆ ಮತಾಂತರಕ್ಕೆ ಯತ್ನದ ಬಗ್ಗೆ ತಪ್ಪೊಪ್ಪಿಗೆ. ಮುಂದಿನ ತನಿಖೆ ಕೈಗೊಂಡಿರುವ ಕೆ.ಎಂ.ದೊಡ್ಡಿ ಪೊಲೀಸರು.ಕೆ.ಎಂ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


