ಮಂಡ್ಯ: ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡ್ತಿದೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಒಬಿಸಿ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿಂದು ಒಬಿಸಿ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಪ್ರವೀಣ್ ನೆಟ್ಟಾರ್ ಸಾವಿನ ಬಳಿಕ ಕಟಿಲ್ ಹೋದ ಸಂದರ್ಭದಲ್ಲಿ ದಿಕ್ಕಾರ ಕೂಗಿದರು. ಕಾಂಗ್ರೆಸ್ ನವರು ಅವರಿಗೆ ದಿಕ್ಕಾರ ಕೂಗಲಿ. ಬದಲಿಗೆ ಬಿಜೆಪಿಗೆ ದಿಕ್ಕಾರವನ್ನ ಹಿಂದೂಗಳು ಕೂಗಿದರು. ಇದಕ್ಕೆ ಸಹಕಾರ ಮಾಡಿದ್ದು ವಿಶ್ವ ಹಿಂದೂ ಪರಿಷತ್ ಎಂದರು.
ಮಂಗಳೂರಿನಲ್ಲಿ ದಿಕ್ಕಾರ ಕೂಗಿದ್ದು ವಿಶ್ವ ಹಿಂದೂ ಪರಿಷತ್ ನವರು. ಕಾರ ಟೈರ್ ಪಂಚರ್ ಮಾಡಿದ್ದು ಭಜರಂಗದಳದವರು. ಗೋ ಬ್ಯಾಕ್ ಹೇಳಿದ್ದು ಆರ್ಎಸ್ಎಸ್ನವರು. ಹಿಂದೂತ್ವ ಸಂಪೂರ್ಣವಾಗಿ ನೆಲಕುಸಿಯುತ್ತಿದೆ. ಸಾವಿನ ಮೇಲೆ ರಾಜಕಾರಣ ಮಾಡುವ ವ್ಯವಸ್ಥೆ ಇದೆ.
ಪರಮೇಶ ಮೇಸ್ತಾ ಸಹಜ ಸಾವು ಎಂದು CBI ವರದಿ ಕೊಟ್ಟಿದೆ. ಧರ್ಮ ಧರ್ಮದ ನಡುವೆ ಸಂಘರ್ಷ ಆಯ್ತು. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಷ್ಟೆ ಅಮೇಲೆ ಇವರು ಮಾತನಾಡಲ್ಲ. ಆ ಸಾವನ್ನ ತಮ್ಮ ಸ್ವಾರ್ಥಕ್ಕೆ ಉಪಯೋಗ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದರು.
ಬಿಜೆಪಿ ಹೊಣೆಗೆ ಕರಾವಳಿ ಭಾಗದಲ್ಲಿ ಬಹಳ ಅಮಾಯಕರು ಸಾಯ್ತಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಸಂಘರ್ಷ ಬದಲಾವಣೆ ಮಾಡಲು ಸಾಧ್ಯ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದು ಏನಾಯ್ತು? ತಪ್ಪು ಮಾಡಿದವರಿಗೆ ಶಿಕ್ಷೆ ಯಾಗುತ್ತದೆ. ದೊಡ್ಡ ದೊಡ್ಡವರು ರಾಜಕಾರಣ ಮಾಡಿದ್ದಾರೆ. ಯಾರು ಸಹ ಧರ್ಮ, ಜಾತಿ ಮೇಲೆ ರಾಜಕಾರಣ ಮಾಡಿಲ್ಲ. ಇವತ್ತು ಬಿಜೆಪಿಯವರು ಧರ್ಮ, ಜಾತಿ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಅವರು ದೂರಿದರು.


