ದೇವಸ್ಥಾನ ಜಲಾವೃತ; ಮೊಣಕಾಲು ನೀರಿನಲ್ಲಿ ಮದುವೆಯಾದ ಜೋಡಿಗಳು

ಚೆನ್ನೈ: ಭಾರೀ ಮಳೆಯಿಂದಾಗಿ ತಮಿಳುನಾಡಿನ ಚೆನ್ನೈನಲ್ಲಿ ಹಲವು ಕಟ್ಟಡ, ದೇವಸ್ಥಾನಗಳು ಜಲಾವೃತಗೊಂಡಿವೆ. ಇದರಿಂದ ಮದುವೆಗಳು ವಿಳಂಬವಾಗಿವೆ. ಅದರಂತೆ ದೇವಸ್ಥಾನದ ಜಲಾವೃತ ಮಧ್ಯೆ ದೇವಸ್ಥಾನದಲ್ಲಿ 5 ಜೋಡಿಗಳು ಮದುವೆ ಹಾಗಿದ್ದಾರೆ.

ಚೆನ್ನೈನ ಪುಲಿಯಾಂತೋಪ್ ಪ್ರದೇಶದ ಆಂಜನೇಯರ್ ದೇವಸ್ಥಾನದಲ್ಲಿ, ದೇವಸ್ಥಾನದೊಳಗೆ ನೀರು ನಿಂತಿದ್ದರಿಂದ ಐದು ವಿವಾಹಗಳು ಇಂದು ವಿಳಂಬವಾಗಿ ಮದುವೆಯಾದರು. ತಿಂಗಳ ಹಿಂದೆಯೇ ಮದುವೆ ನಿಗದಿಯಾಗಿದ್ದ ಜೋಡಿಗಳು ಹವಾಮಾನ ವೈಪರೀತ್ಯವನ್ನು ಎದುರಿಸಿ ದೇವಸ್ಥಾನದ ಹೊರಗೆ ಸಾಲುಗಟ್ಟಿ ನಿಂತಿದ್ದರು.

ದೇವಾಲಯದ ಹೊರಗಿನ ವೀಡಿಯೊದಲ್ಲಿ ದಂಪತಿಗಳು ಛತ್ರಿಗಳನ್ನು ಹಿಡಿದುಕೊಂಡು ಜಲಾವೃತವಾದ ದೇವಾಲಯದ ಆವರಣವನ್ನು ಪ್ರವೇಶಿಸಿ ನೀರಿನಲ್ಲಿಯೇ ಆಂಜನೇಯರ್ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ವಿವಾಹವಾಗಿದ್ದನ್ನ ಕಾಣಬಹುದು.

RELATED ARTICLES

Related Articles

TRENDING ARTICLES