Site icon PowerTV

ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ; 20ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು: ಕಾಂಗ್ರೆಸ್​ ಪಕ್ಷದ ಎರಡು ಬಣಗಳ ನಡುವೆ ಮಾರಾಮಾರಿ ಜಗಳ ನಡೆದು ಮಹಿಳೆಯರು ಸೇರಿದಂತೆ 20ಕ್ಕೂ ಅಧಿಕ ಮಂದಿಗೆ ಗಾಯಗೊಂಡಿರುವ ಘಟನೆ ನಡೆದಿದೆ.

ಇಂದು ದಾಸರಹಳ್ಳಿಯ ಎನ್​ಟಿಟಿಎಫ್​ ಜಿಮ್‌ಖಾನ ಕ್ಲಬ್​ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಕಾಂಗ್ರೆಸ್​ ಕಾರ್ಯಾಕರ್ತರ ನಡುವೆ ಗಲಾಟೆಯಾಗಿದೆ.

ದಾಸರಹಳ್ಳಿ ಉಸ್ತುವಾರಿ ಡಾ. ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಪಿ.ಎನ್​ ಕೃಮೂರ್ತಿಯವ್ರನ್ನ ಆಹ್ವಾನಿಸದ್ದಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಕೆಪಿಸಿಸಿ ಸದಸ್ಯರಾಗಿರುವ ಪಿ.ಎನ್ ಕೃಷ್ಣಮೂರ್ತಿ, ದಾಸರಹಳ್ಳಿ ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ನಾಗಲಕ್ಷ್ಮಿ ವಿರುದ್ಧ ಆಕ್ರೋಶ ವ್ಯಕ್ತಿಯಾಗಿದ್ದು, ಏಕಾಏಕಿ ಗಲಾಟೆಗೆ 20 ಕ್ಕೂ ಹೆಚ್ಚು ಕೃಷ್ಣಮೂರ್ತಿ ಬೆಂಬಲಿಗರಿಂದ ಏಕಾಏಕಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಇಬ್ಬರು ಮಹಿಳಾ ಕೈ ಕಾರ್ಯಕರ್ತೆಯರಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version