Site icon PowerTV

ರಾಜ್ಯದ್ಯಂತ ರಾಣಾ ಚಲನಚಿತ್ರ ಅದ್ದೂರಿ ಬಿಡುಗಡೆ..!

ವಿಜಯನಗರ:ನಾಳೆ ರಾಣಾ ಚಲನಚಿತ್ರ ಅದ್ದೂರಿ ಬಿಡುಗಡೆ ಹಿನ್ನೆಲೆ, ಹೊಸಪೇಟೆಯ ಮಿರಾಲಂ ಥಿಯೇಟರ್ ನ ಲ್ಲಿ ಚಿತ್ರ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆದಿದೆ. ನಾಳೆ ಚಿತ್ರ ಬಿಡುಗಡೆ ವೇಳೆ ಸಚಿವ ಆನಂದ್ ಸಿಂಗ್, ಕಂಪ್ಲಿ ಶಾಸಕ ಗಣೇಶ್, ಶಾಸಕ ಭೀಮಾನಾಯ್ಕ್, ಪಿ.ಟಿ ಪರಮೇಶ್ವರ ನಾಯಕ್ ಸೇರಿ ಹಲವರು ಭಾಗಿ.

ಅದರ ಪ್ರಯುಕ್ತ ಇಂದು ರಾಣಾ ಚಿತ್ರ ತಂಡದಿಂದ ಬೈಕ್ ರ್ಯಾಲಿ ಆಯೋಜನೆ ನಡೆಸಿದ್ದು, ನಗರದ ಪುನೀತ್ ಪುತ್ಥಳಿಗೆ ಪೂಜೆ ಬಳಿಕ ಬೈಕ್ ರ್ಯಾಲಿ. ಬೈಕ್ ರ್ಯಾಲಿಯಲ್ಲಿ ನೂರಾರು ಜನರು ಭಾಗಿ. ನಾನು 8 ವರ್ಷಗಳ ಕಾಲ ಕಷ್ಟ ಪಟ್ಟಿದ್ದೇನೆ. ಒಂದು ಕುಟುಂಬ ಸಮೇತ ಬಂದು ನೋಡೋ ಸಿನಿಮಾ ಮಾಡಿದ್ದೇವೆ.

ನಾಳೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ ಗುಜ್ಜಲ್ ಪುರುಷೋತ್ತಮ್, ಗುಜ್ಜಲ್ ಪುರುಷೋತ್ತಮ್ ರಾಣಾ ಚಿತ್ರದ ನಿರ್ದೇಶಕ. ರಾಣಾ ಚಿತ್ರವನ್ನ ಥಿಯೇಟರ್ ಗೆ ಬಂದು ನೋಡಬೇಕು. ಸಾಕಷ್ಟು ಕಷ್ಟಪಟ್ಟಿದ್ದೇವೆ, ಚಿತ್ರ ನೋಡಿ ಹಾರೈಸಬೇಕು
ಇದೇ ವೇಳೆ ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಹೇಳಿಕೆ ನಿಡಿದ್ದಾರೆ. ರಾಣಾ ಚಿತ್ರದಲ್ಲಿ ಕಾಮಿಡಿ ಪಾತ್ರ ಮಾಡಿದ್ದೇನೆ. ಕುಟುಂಬ ಸಮೇತ ಬಂದು ನೋಡುವ ಸಿನಿಮಾ ಇದಾಗಿದೆ. ಸ್ನೇಹ, ಪ್ರೀತಿ ಹೇಗಿರಬೇಕು ಅನ್ನೋದನ್ನ ಚಿತ್ರದಲ್ಲಿ ಹೆಣೆದಿದ್ದಾರೆ.

Exit mobile version