Site icon PowerTV

ಟಿಪ್ಪು ಜಯಂತಿಗೆ ಅವಕಾಶ ಹಿನ್ನೆಲೆ ಕಿಡಿಕಾರಿದ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಹಿನ್ನೆಲೆ, ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದು ತಪ್ಪು ಎಂದು ಪಾಲಿಕೆ ದ್ವಂದ್ವ ನಿಲುವು ತಾಳಿದೆ. ಬಿಜೆಪಿಯವರೇ ಟಿಪ್ಪು ಜಯಂತಿ ರದ್ದು ಮಾಡಿದ್ರು, ಈಗ ಈದ್ಗಾ ಮೈದಾನದಲ್ಲಿ ಅವರೇ ಟಿಪ್ಪು ಜಯಂತಿಗೆ ಅವಕಾಶ ಕೊಟ್ಟಿದ್ದಾರೆ.

ಬಿಜೆಪಿಯವರು ಟಿಪ್ಪು ಜಯಂತಿ ಹೆಸರಲ್ಲಿ ಕೆಳಮಟ್ಟದ ರಾಜಕೀಯ ಮಾಡ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ನಾವು ಸಹಿಸಲ್ಲ
ಬೇರೆ ಮಹಾಪುರುಷರ ಜೊತೆಗಿನ ಹೋಲಿಕೆ ಸರಿಯಲ್ಲ. ಟಿಪ್ಪು ಒಬ್ಬ ಮತಾಂದ,ದೇಶ ದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸುತ್ತೇನೆ. ಕನಕ ಜಯಂತಿ ಆಚರಣೆಗೆ ನಾವೇ ಮನವಿ‌ ಕೇಳಿದ್ದೇವೆ.ನಾವೇ ಖುದ್ದು ಆಚರಣೆ ಮಾಡ್ತೇವೆ
ಚೆನ್ನಮ್ಮ ಸರ್ಕಲ್ ಬಳಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

 

Exit mobile version