Site icon PowerTV

ಮಾಲ್ಡೀವ್ಸ್‌ ಅಗ್ನಿ ದುರಂತದಲ್ಲಿ 9 ಭಾರತೀಯರ ಸಾವು.!

ಮಾಲ್ಡೀವ್ಸ್; ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಇಕ್ಕಟ್ಟಾದ ಗ್ಯಾರೇಜ್‌ಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಹೊಟೇಲ್​, ವಸತಿ ಗೃಹಗಳಿಗೆ ವ್ಯಾಪಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಮಾಲ್ಡೀವ್ಸ್ ದ್ವೀಪಸಮೂಹದ ರಾಜಧಾನಿಯು ಉನ್ನತ ಮಾರುಕಟ್ಟೆಯ ರಜಾ ತಾಣವೆಂದು ಪ್ರಸಿದ್ಧವಾಗಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್‌ನಿಂದ ಉಂಟಾದ ಬೆಂಕಿ ಹಾಗೇ ಕಟ್ಟಡದ ಮೇಲಿನ ಮಹಡಿಗೆ ವ್ಯಾಪಿಸಿದೆ. ಕನಿಷ್ಠ 10 ಮೃತದೇಹಗಳನ್ನು  ಈಗ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಕಾಲ ಇಡಿಯಿತು. ಮೃತರಲ್ಲಿ ಒಂಬತ್ತು ಭಾರತೀಯರು ಮತ್ತು ಬಾಂಗ್ಲಾದೇಶ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version