Site icon PowerTV

2023 ಚುನಾವಣೆಗೆ ಪ್ರಬಲ ಸ್ಪರ್ಧೆ ನೀಡುವತ್ತ ಆಮ್ ಆದ್ಮಿ ಪಕ್ಷ

ಹಾಸನ: ಹಾಸನದಲ್ಲಿ ಆಪ್ ರಾಜ್ಯಾಧ್ಯಕ್ಷ ಭಾಸ್ಕರ್‌ರಾವ್ ಹೇಳಿಕೆ ನಿಡಿದ್ದು, ಆಮ್ ಆದ್ಮಿ ಪಕ್ಷ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ, ಗ್ರಾಮಾಂತರ ಭಾಗದಲ್ಲೂ ಇದೆ ಎಂಬ ಸಂದೇಶವನ್ನು ಕೊಡುತ್ತಿದ್ಧೇವೆ. 2023 ರ ಚುನಾವಣೆಯಲ್ಲಿ ಪ್ರಬಲವಾಗಿ ಸ್ಪರ್ಧಿಸುತ್ತಿದ್ದೇವೆ.
ಈಗಾಗಲೇ ದೆಹಲಿ, ಪಂಜಾಬ್, ಗುಜರಾತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಚುನಾವಣಾ ಕಣಕ್ಕೆ ಇಳಿದು ಜನರ ಬೆಂಬಲ ಪಡೆದಿದ್ದಾರೆ
ಪ್ರಧಾನಮಂತ್ರಿ, ಅಮಿತ್ ಷಾ ಇರುವಂತಹ ಗುಜರಾತ್‌ಗೆ ಅತ್ಯಂತ ಧೈರ್ಯವಾಗಿ ಹೋಗಿ ಅಲ್ಲಿ ಪ್ರಚಾರ ಮಾಡಿದ್ದಾರೆ.

ಡಿ.8 ಚುನಾವಣೆ ಫಲಿತಾಂಶ ಬಂದ ನಂತರ ಅರವಿಂದ ಕೇಜ್ರಿವಾಲ್ ಮತ್ತು ಅವರ ಕೇಂದ್ರ ತಂಡ ಕರ್ನಾಟಕವನ್ನು ಗುರಿಯಾಗಿ ತೆಗೆದುಕೊಳ್ಳುತ್ತೆ. ಮೂರು ಪಕ್ಷದ ಮುಖಗಳನ್ನು ನೋಡಿ ಕರ್ನಾಟಕದ ಜನ ಬೇಸತ್ತು ಹೋಗಿದ್ದಾರೆ.  ಹೊಸದಾಗಿ ಏನಿದೆ ಕೊಡಲು, ಹೊಸದಾಗಿ ಏನ್ ಕೊಡುತ್ತಾರೆ ಇವರು. ಒಬ್ಬರು ಭ್ರಷ್ಟಾಚಾರಕ್ಕೆ ನಾಂದಿ ಆಡಿದ್ದಾರೆ, ಇನ್ನೊಬ್ಬರು ಭ್ರಷ್ಟಾಚಾರ ಬೆಳೆಸಿದ್ದಾರೆ, ಇನ್ನೊಬ್ಬರು ಭ್ರಷ್ಟಾಚಾರದ ಫಲಿತಾಂಶ ತೆಗೆದುಕೊಳ್ಳುತ್ತಿದ್ದಾರೆ. ಇವತ್ತು ಕುಂತರೆ, ನಿಂತರೆ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಜನಸಾಮಾನ್ಯರು ಎಲ್ಲಿಗೆ ಹೋಗಬೇಕು, ಆ ಪರಿಸ್ಥಿತಿ ಆಗಿದೆ. ಇಪ್ಪತ್ತರಿಂದ ಮೂವತ್ತು ಸಾವಿರ ಜನ ಕರ್ನಾಟಕದ ಅಷ್ಟು ಸಂಪತ್ತನ್ನು ಲೂಟಿ ಹೊಡೆದಿದ್ದಾರೆ.

ಮೂರು ಪಕ್ಷದ ಏಜೆಂಟರು, ಇಂಜಿನಿಯರ್‌ಗಳು, ಗುತ್ತಿಗೆದಾರರು ಆರು ಕೋಟಿ ಜನರ ಹಣವನ್ನು ಲೂಟಿ ಹೊಡೆದಿದ್ದಾರೆ. ಪ್ಯಾಕೇಜ್ ಅಂದರೆ ಶಾಸಕನಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಲೂಟಿ ಹೊಡೆಯಲು ಅವಕಾಶ. ಪ್ಯಾಕೇಜ್ ಅನ್ನುವ ಶಬ್ದ ಯಾರಾದ್ರು ಉಪಯೋಗಿಸಿದರೆ ಒದ್ದು ಓಡಿಸಿ ಆ ಪಕ್ಷದವರನ್ನು. ಪ್ಯಾಕೇಜ್‌ನಿಂದ ಇದುವರೆಗೂ ಯಾರೂ ಉದ್ದಾರ ಆಗಿಲ್ಲ. ಮೋದಿಯವರು ಗುಜರಾತ್‌ಗೆ 70 ಸಾವಿರ ಕೋಟಿ ಪ್ಯಾಕೇಜ್ ಕೊಡ್ತಿನಿ ಅಂತರೆ, ಚುನಾವಣೆ ಸಂದರ್ಭದಲ್ಲಿ ಎಪ್ಪತ್ತು ಸಾವಿರ ಕೋಟಿ ತಗೊಂಡು ಜನ ಎನು ಮಾಡುತ್ತಾರೆ.

ಅಭಿವೃದ್ಧಿ ನಿರಂತರವಾದ ಒಂದು ಪ್ರೋಸೆಸ್ ಕಾಂಗ್ರೆಸ್ ಕೂಡ ಸರಿಯಾಗಿ ಅಭಿವೃದ್ಧಿ ಮಾಡಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲೂ ಮಾಡಲಿಲ್ಲ. ಅಧಿಕಾರಿಗಳು ಎಲ್ಲರಿಗೂ ಸಿಗಬೇಕು, ಎಲ್ಲರೂ ಅಧಿಕಾರ ಚಲಾಯಿಸಬೇಕು. ಇದು ಜನಸಾಮಾನ್ಯರ ಪಕ್ಷ ಇದು
ಪಂಜಾಬ್‌ನಲ್ಲಿ ಮುಖ್ಯಮಂತ್ರಿಯನ್ನು ಸೋಲಿಸಿರುವವನು ಮೊಬೈಲ್ ಅಂಗಡಿಯಲ್ಲಿ ಕೆಲಸ‌ ಮಾಡುವವನು. ಅದು ಕೇವಲ ಆಪ್ ಆದ್ಮಿ ಪಾರ್ಟಿಲಿ ಮಾತ್ರ ಸಾಧ್ಯ ಆಗದೋ, ಬೇರೆ ಯಾವ ಪಾರ್ಟಿಲೂ ಆಗಲ್ಲ.

ಇಲ್ಲಿ ನಾಯಕರನ್ನು ನೋಡಬೇಕೆಂದರೆ ಹಣ್ಣಿನ ಬುಟ್ಟಿ, ಹೂಗುಚ್ಛೆ ಕೊಡಬೇಕು, ಸಲಾಂ ಹೊಡಿಬೇಕು, ಕಾಲಿಗೆ ನಮಸ್ಕಾರ ಮಾಡಬೇಕು.
ಮೂರು ವರ್ಷ ಸರ್ಕಾರಿ ನೌಕರಿ ಇದ್ದರು ಸಹ ಬಿಟ್ಟು ಬಂದಿದ್ದೀನಿ. ನನ್ನ ತರ ಬಹಳಷ್ಟು ಜನ ಸಾಫ್ಟ್‌ವೇರ್, ಬೇರೆ ಬೇರೆ ಹುದ್ದೆಗಳಲ್ಲಿರುವವರು ತಮ್ಮ ಸಮಯವನ್ನು ನೀಡಲು ರೆಡಿಯಾಗಿದ್ದಾರೆ. ವಿದ್ಯಾವಂತರು, ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡಿರುವವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

Exit mobile version