Site icon PowerTV

ಕಾಂಗ್ರೆಸಿಗರಿಂದ ಟಿಪ್ಪು ಜಯಂತಿ ಆಚರಣೆ..!

ಮಂಡ್ಯ: ಇಂದು ಟಿಪ್ಪು ಜಯಂತಿ ಹಿನ್ನಲೆ. ಮಂಡ್ಯದಲ್ಲಿ ಕಾಂಗ್ರೆಸಿಗರಿಂದ ಟಿಪ್ಪು ಜಯಂತಿ ಆಚರಣೆ. ಮಂಡ್ಯದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಚರಣೆ ಮಾಡಲಾಗಿದೆ.

ಮಂಡ್ಯ ಜಿಲ್ಲಾ ಕಾಂಗ್ರೆಸ್ ವತಿಯಿಂದ ಟಿಪ್ಪು ಜಯಂತಿ. ಟಿಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಲಾಗಿದೆ. ಬಳಿಕ ಸಿಹಿ ಹಂಚಿ ಟಿಪ್ಪುಗೆ ಜೈಕಾರ ಕೂಗಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು. ಸೂರಿನ ಹುಲಿ ಟಿಪ್ಪು ಎಂದು ಜೈಕಾರ. ಗತ್ತಿನ ಇತಿಹಾಸದಲ್ಲಿ ಮಕ್ಕಳನ ಒತ್ತೆ ಇಟ್ಟಿದಂತ ದೊರೆ ಟಿಪ್ಪು.ಅಂತಹ ಸ್ವಾತಂತ್ರ್ಯ ಹೋರಾಟಗಾರನ ಜನ್ಮದಿನವನ್ನ ಆಚರಣೆ.

ಟಿಪ್ಪು ಜಾತ್ಯಾತೀತ ಮನೋಭಾವ ಹೊಂದಿದ್ದರು. ನಮ್ಮ ನಾಡನ್ನ ಕಟ್ಟಲು ಮುಂದಾಗೋಣ ಎಂದು ಟಿಪ್ಪು ನೆನೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್. ಈ ವೇಳೆ ಕಾಂಗ್ರೆಸ್ ಮುಖಂಡ ಜಬಿವುಲ್ಲ,ಮುಜಾಯಿದ್,ಚಿನಕುರಳಿ ರಮೇಶ್, ಸೇರಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

Exit mobile version