Site icon PowerTV

ಮುಂಬರುವ ಚುನಾವಣೆಯಲ್ಲಿ ಗೆಲುವು ನಿಶ್ಚಿತ; ಮಾಜಿ ಸಿಎಂ ಯಡಿಯೂರಪ್ಪ

ದೆಹಲಿ: ಇಂದು ದೆಹಲಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,ಇಂದು ಚುನಾವಣಾ ಸಮಿತಿ ಸಭೆ ಇದೆ. ಸಭೆ ಬಳಿಕ ನಾಳೆ ವಾಪಸ್ ಬೆಂಗಳೂರಿಗೆ ಹೋಗುತ್ತೇನೆ. ಇನ್ನು ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ ರವರು, ಸತೀಶ್ ಜಾರಕಿಹೊಳಿ ತಲೆತಿರುಕ ಮಾತನಾಡಿದ್ದಾರೆ. ನೀಡಿರುವ ಹೇಳಿಕೆ ಅವರಿಗೆ ಶೋಭೆ ತರವಂತದ್ದಲ್ಲ. ಇವರು ಕ್ಷಮೆ ಕೇಳಬೇಕು. ದೇಶ,ವಿದೇಶಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ಡಿಸೆಂಬರ್ ನಲ್ಲಿ ಅಭ್ಯರ್ಥಿ ಘೋಷಣೆ ವಿಚಾರ ಮಾಡುವುದರ ಕುರಿತು 150 ರಲ್ಲಾದ್ರು ಮಾಡ್ಲಿ, 224 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾನು ಮತ್ತು ಸಿಎಂರವರು ರಾಜ್ಯ ಪ್ರವಾಸ ಮಾಡಿದ್ದಾಗ ಜನರ ಬೆಂಬಲ‌ ನೋಡಿದ್ರೆ,140ಕ್ಕೂ ಹೆಚ್ಚು ಸೀಟು ಪಡೆಯುತ್ತೇವೆ. ಸೂರ್ಯ ಚಂದ್ರರಿರೋದು ಎಷ್ಟು ಸತ್ಯೆವೊ. ನಾವು ಸರ್ಕಾರ ರಚನೆ ಮಾಡೊದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ.

Exit mobile version