Site icon PowerTV

ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾದ್ರ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ..?

ಬೆಂಗಳೂರು: ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂತಹ ಹೇಳಿಕೆಗಳು ಕಾಂಗ್ರೆಸ್ ನಲ್ಲಿ ಹೊಸದೇನಲ್ಲ, ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ.

ಹುಚ್ಚರಿಗೆ ಅಮವಾಸ್ಯೆ ಹುಣ್ಣಿಮೆ ಹಿಂದೆ ಮುಂದಿನ ದಿನ ಅಗಾಗ ತಲೆ ಕೆಡುತ್ತದಂತೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಡುತ್ತಾರೆ. ಕೇಸರಿ ಬಣ್ಣ ಕಂಡರೆ ಅವರು ಮೂರ್ಛೆ ಹೋಗುತ್ತಾರೆ. ಬಿಳಿ ಟೋಪಿ ಕಂಡರೆ ಹಾಕಿಸಿಕೊಂಡು ತಲೆ ಬಾಗುತ್ತಾರೆ.ಹಿಂದು ಮತ್ತು ಬೌದ್ಧ ಧರ್ಮ ಸನಾತನ ಧರ್ಮಗಳು.ಮಲ್ಲಿಕಾರ್ಜುನ ಖರ್ಗೆಯವರೇ ನೀವು ಹಿಂದೂ ವಿರೋಧಿಯಾಗಿದ್ದರೆ, ಬೌದ್ಧ ಧರ್ಮ ಏನು?ನಿಮ್ಮ ಹುಟ್ಟು ನಮಗೆ ಅನುಮಾನ ಕಾಡುತ್ತದೆ.ಹಿಂದೂ ಧರ್ಮ ಅವಮಾನಕರ ಆಗಿದ್ದರೆ ನೀವು ಹುಟ್ಟಿದ್ದೆಲ್ಲಿ?ಜಾರಕಿಹೊಳಿ ಅವರದ್ದು ಜಾರಿಕೊಳ್ಳುವ ಪಕ್ಷ, ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಉಚ್ಛಾಟನೆ ಮಾಡದೇ ಇದ್ದರೆ ಹೇಳಿಕೆಯನ್ನು ಒಪ್ಪಿಕೊಂಡು ಹಿಂದೂ ವಿರೋಧಿಯಾದಂತಾಗುತ್ತದೆ. ಸತೀಶ್ ಜಾರಕಿಹೊಳಿಯವರೇ ನೀವು ಅಂಬೇಡ್ಕರ್ ಪೋಟೋ ಇಟ್ಟುಕೊಂಡ ತಕ್ಷಣ ಎಲ್ಲವಯು ಕಡಿಮೆಯಾಗುತ್ತದಾ? ಹಿಂದೂ ರಾಷ್ಟ್ರ ಅಲ್ಲ ಅಂತಾ ಹೇಳಿದರೆ ಅವರು ಹುಚ್ಚರಾಗುತ್ತಾರೆ
ಬೌದ್ಧ ಧರ್ಮ ಹಿಂದುತ್ವದ ಒಂದು ಭಾಗ ಅಂತಾ ತಿಳಿದಿದ್ದೇವೆ.

Exit mobile version