Sunday, August 24, 2025
Google search engine
HomeUncategorized'ಇನ್ನೆರಡು-ಮೂರು ತಿಂಗಳಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರು ಜೆಡಿಎಸ್ ಗೆ ಸೇರ್ಪಡೆ'

‘ಇನ್ನೆರಡು-ಮೂರು ತಿಂಗಳಲ್ಲಿ ಬಿಜೆಪಿ-ಕಾಂಗ್ರೆಸ್ ಶಾಸಕರು ಜೆಡಿಎಸ್ ಗೆ ಸೇರ್ಪಡೆ’

ಮಂಡ್ಯ: ಮಹದೇವುಪರ ಗ್ರಾಮದಲ್ಲಿ‌ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮ.
ಬಿಜೆಪಿ ಪಕ್ಷದಲ್ಲಿ ಜನ ನೆಮ್ಮದಿಯಾಗಿರೋದನ್ನ ಬಯಸೋದಿಲ್ಲ. ದಿನಾ ಒಂದೊಂದು ಕಾಂಟ್ರವರ್ಸಿ ಸೃಷ್ಟಿಸಲಾಗುತ್ತಿದೆ.ಹಿಜಾಬ್ ಆಯ್ತು,ಈಗ ಮತ್ತೊಂದು ತಗೊಂಡು ಕೂತಿದ್ದಾರೆ. ಹಿಂದುತ್ವ ಶುರುಮಾಡಿದ್ದಾರೆ.

ಎಲ್ಲವೂ ಸರಿ ಇದ್ದ ಜಾಗದಲ್ಲಿ ವಿನಾಕಾರಣ ಗಲಾಟೆ ಮಾಡಿಕೊಳ್ಳೊ ವಾತವರಣ ಕ್ರಿಯೇಟ್ ಆಗುತ್ತಿದೆ. ಜನ ಶಾಂತಿಯಿಂದ ಬದುಕಬೇಕೆಂಬ ಉದ್ದೇಶ ಸರ್ಕಾರಕ್ಕೆ ಕಾಣುತ್ತಿಲ್ಲ.  ಹಿಂದುತ್ವದ ವ್ಯಾಖ್ಯಾನಗಳೇನಿದೆ ಅದು ಸರಿ ಇಲ್ಲ. ನಮ್ಮ ದೇಶ ಹಿಂದೂ ರಾಷ್ಟ್ರ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಅದರಲ್ಲಿ ಅವರ ವ್ಯಾಖ್ಯಾನವನ್ನ ಹೇಳುವಾಗ ಪಾಲಿಷ್ಡ್ ಆಗಿ ಮಾತನಾಡಬೇಕಾಗುತ್ತೆ. ಸಮಾಜವನ್ನ ಒಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಮುಖಂಡರೇ. ಹೇಳಕೆ‌ಬರದೆ ಅಥವಾ ಹೇಳೋ ರೀತಿ ಹೇಳದೆ ಬಹಳ ಗೊಂದಲ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಯಾವುದೇ ರಾಜಕಾರಣಿಗಳು ಸಹಕರಿಸಬಾರದು. ಬಿಜೆಪಿ-ಕಾಂಗ್ರೇಸ್ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ.

RELATED ARTICLES
- Advertisment -
Google search engine

Most Popular

Recent Comments