Site icon PowerTV

ಕಮಲ ಪಾಳಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಶಾಸಕ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಚಿತ್ತಾಪುರದಲ್ಲಿ ಪ್ರಿಯಾಂಕ್ ಕಳೆದು ಹೋದ್ ಎಂಬ ಪೋಸ್ಟರ್ ಕಾಂಗ್ರೆಸಿಗರನ್ನು ಆಕ್ರೋಶಕ್ಕೊಳಗಾಗುವಂತೆ ಮಾಡಿತ್ತು.

ಈ ಕುರಿತು ಕೈ ಪಾಳಯದಲ್ಲಿ ಸಾಕಷ್ಟು ಚರ್ಚೆಗಳಾಗಿತ್ತು. ಈ ಕುರಿತು ಸ್ವತಹ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ ರವರು, ಇದು ಯಾರು ಅಂಟಿಸಿದ್ದು ಯಾರು ಬಿಜೆಪಿಯವರು. ನಾನು ಬಿಜೆಪಿಯವರಿಗೆ ಉತ್ತರ ಕೊಡಬೇಕಿಲ್ಲ, ನಾನು ಉತ್ತರ ಕೊಡಬೇಕಿರುವ ಕ್ಷೇತ್ರದ ಜನರಿಗೆ. 511 ಕಿಮೀ ನಡಿಗೆ ಮಾಡುತ್ತಿದ್ದೆ.

ಭ್ರಷ್ಟಾಚಾರದ ವಿರುದ್ಧ ನಡಿಗೆ ಮಾಡಿದ್ದೆ, ಕೋಳಿ ಸಮುದಾಯಕ್ಕೆ ಎಸ್​ಟಿ ಮೀಸಲಾತಿಗಾಗಿ ಬೇಡಿಕೆ ಮಾಡಿದ್ದೇನೆ. ದೆಹಲಿಗೆ ಹೋಗಿ‌ ಸಚಿವರಿಗೆ ಮನವಿ ಕೊಟ್ಟಿದ್ದೆ. ನಾನ್ಯಾವಾಗ ಕಳೆದು ಹೋಗಿದ್ದೇನೆ,  ಕಳೆದು ಹೋಗಿದ್ದರೆ ಕ್ಷೇತ್ರದ ಜನ ಗೇಟ್ ಪಾಸ್ ಕೊಡುತ್ತಾರೆ.
ಇವರು ಯಾರು ಕೇಳೋದಕ್ಕೆ, ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

Exit mobile version