Site icon PowerTV

ಮಲೆನಾಡಿನಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ

ಹಾಸನ : ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಬೆಳೆನಷ್ಟ, ಜೀವಹಾನಿ ಹೀಗೆ ಸಹಿಸಿ ಕೊಳ್ಳಲಾರದಷ್ಟು ಮಿತಿ ಮೀರಿದೆ. ಇದನ್ನು ಪರಿಹರಿಸಿ ಎಂದು ಸರ್ಕಾರಗಳ ವಿರುದ್ಧ ಜನಾಕ್ರೋಶ ಪ್ರಬಲಗೊಂಡಿದೆ.

ಇದು ಒಂದೆಡೆಯಾದರೆ ಹಸಿದ ಹೊಟ್ಟೆಗೆ ಹಿಡಿಯಷ್ಟು ಆಹಾರ ಸಿಗದೆ ಅದೇ ಕಾಡಾನೆಗಳು ಮನೆ ಮುಂದೆ ಬಂದು ಪರಿತಪಿಸುತ್ತಿರುವ, ಅಂಗಲಾಚುತ್ತಿರುವ ದೃಶ್ಯಗಳು ಅಯ್ಯೋ ಎನಿಸುತ್ತಿವೆ. ವಾರದ ಹಿಂದಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಮನು ಎಂಬ ಯುವ ರೈತ ಕಾಡಾನೆ ದಾಳಿಗೆ ಬಲಿಯಾಗಿದ್ದರು.

ಇನ್ನು, ಮಂಗಳವಾರ ಮಧ್ಯಾಹ್ನ ಅದೇ ಗ್ರಾಮದ ಲೋಕೇಶ್ ಎಂಬುವರ ಮನೆ ಎದುರು ಬಂದ ಆನೆಯೊಂದು ಹಿಡಿ ಸೊಪ್ಪು ನೀಡಿ, ಇಲ್ಲವೇ ಬೇರೆ ಯಾವುದಾದರೂ ಆಹಾರ ಕೊಡಿ ಎಂದು ಮೂಕವಾಗಿ ಬೇಡುತ್ತಿದ್ದ ಕರುಣಾಜನಕ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

Exit mobile version