Site icon PowerTV

ನಕಲಿ ಪಾಸ್ ಪೋರ್ಟ್​ ಮಾಡುತ್ತಿದ್ದ ಜಾಲವನ್ನು ಪತ್ತೆಯಚ್ಚಿದ ಪೊಲೀಸರು

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ರು ನಕಲಿ ಪಾಸ್ ಪೋರ್ಟ್ ಮಾಡುತ್ತಿದ್ದ ಜಾಲ ಪತ್ತೆ ಮಾಡಿದ್ದಾರೆ.

ಈ ಆರೋಪಿಗಳು ಪಾಸ್ ಪೋರ್ಟ್ ಮಾಡಲು ಎಲ್ಲ ದಾಖಲೆಗಳನ್ನ ನಕಲು ಮಾಡುತ್ತಿದ್ದರು. ಅಧಾರ್ ಕಾರ್ಡ್ ಕೂಡ ನಕಲಿ ಮಾಡುತ್ತಿದ್ದ ಆರೋಪಿಗಳು. ಇದರಲ್ಲಿ ಎರಡು ರೀತಿಯ ಆರೋಪಿಗಳಿದ್ದಾರೆ, ಒಂದು ವಿದೇಶದಿಂದ ಬಂದು ಇಲ್ಲಿ ಪಾಸ್ ಪೋರ್ಟ್ ಪಡೆಯುತ್ತಾರೆ.ಇನ್ನೊಂದು ಇಲ್ಲಿಂದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಪಾಸ್ ಪೋರ್ಟ್ ಇಲ್ಲಿ ಮಾಡಿಕೊಡುತ್ತಿದ್ದರು.
ಸದ್ಯ ಪ್ರಕರಣ ಸಂಬಂಧ ಎಂಟು ಜನರ ಬಂಧನ ಮಾಡಲಾಗಿದೆ.

Exit mobile version