Site icon PowerTV

ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು:ಹಿಂದೂ ಅಂತ ಯಾರು ತಮ್ಮನ್ನ ಧರ್ಮದ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದೀರೋ ಅವ್ರು ಕಾಂಗ್ರೆಸ್ ಗೆ ವೋಟ್ ಹಾಕಬಾರದು. ಸತೀಶ್ ಜಾರಕಿಹೊಳಿ ಹಾಗೂ ಅವರ ಪಾರ್ಟಿಗೆ ಹಿಂದೂ ಸಾಮರ್ಥ್ಯ ಏನೂ ಅಂತ ತೋರಿಸಬೇಕು.

ಹಿಂದೂ ಧರ್ಮದ ಬಗ್ಗೆ ಸತೀಶ್ ಜಾರಕಿಹೊಳಿ ಅಸಂಬದ್ಧ ಹೇಳಿಕೆ ಹಿನ್ನೆಲೆ, ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನಿಡಿದ್ದಾರೆ. ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜ,ಮರಾಠ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.  ವಿಜಯನಗರದ ರಕ್ಷಣೆಯಲ್ಲಿ‌ ಮುಂಚೂಣಿಯಲ್ಲಿದ್ದ ನಾಯಕ ಸಮೂದಾಯಕ್ಕೂ ಅಪಮಾನ ಮಾಡಿದ್ದಾರೆ. ಅವ್ರು ಹುಟ್ಟಿದ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ.  ನೇತಾಜಿ ಸುಭಾಷ್ ಆಜಾದಿ ಹಿಂದೂ ಪೌಜ್ ಕಟ್ಟಿದ್ರು ನೇತಾಜಿ ಅವ್ರಿಗೆ ಅಪಮಾನ ಮಾಡಿದ್ದಾರೆ.

ಸೈನ್ಯಕ್ಕೆ‌ ಹೋದ್ರೆ ಅವ್ರು ಘೋಷಣೆ ಕೂಗೋದೆ ಜೈಹಿಂದ್ ಅಂತ, ಸೈನ್ಯಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿ ತನ್ನ ತಪ್ಪಿಗೆ ಕ್ಷಮೆ ಕೇಳದೆ ದುರಾಂಕಾರದ ವರ್ತನೆ ತೋರಿದ್ದಾರೆ. ಚಿಕ್ಕಮಗಳೂರಿನಲ್ಲಿ ಶಾಸಕ ಸಿ. ಟಿ.ರವಿ ಹೇಳಿಕೆ ನಿಡಿದ್ದಾರೆ.

Exit mobile version