Site icon PowerTV

ಸಿಎಂ ನೇತೃತ್ವದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ

ಚಿತ್ರದುರ್ಗ : ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯ ವಿಧಾನಸಭಾ ಅಖಾಡ ರಂಗೇರಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಸುತ್ತಿದೆ‌.

ಇಂದು ರಾಯಬಾಗ ಪಟ್ಟಣದಲ್ಲಿ ಬೃಹತ್ ಸಮಾವೇಶವನ್ನು ಬಿಜೆಪಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಿದ್ರು. ಸಿಎಂ ಬೊಮ್ಮಾಯಿ ಜೊತೆ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ್, ಶಾಸಕರಾದ ಶ್ರೀಮಂತ ಪಾಟೀಲ್, ಲಕ್ಷ್ಮಣ ಸವದಿ, ಪ್ರಭಾಕರ್​ ಕೋರೆ ಭಾಗಿಯಾಗಿದ್ದರು. ಈ ವೇಳೆ ಮಾತ್ನಾಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳವೇ ಇನ್ನೂ ಬಗೆಹರಿದಿಲ್ಲ.

ಈ ನಡುವೆ ಹಿಂದೂ ಅಂದ್ರೆ ಬಹಳ ಹೊಲಸು ಅಂತಾ ಸತೀಶ್ ಜಾರಕಿಹೊಳಿ ಹೇಳ್ತಾನೆ.
ಆ ಪುಣ್ಯಾತ್ಮ ಎಲ್ಲಿಂದ ತಂದು ಹೇಳ್ತಿದ್ದಾನೋ ಏನೋ ಗೊತ್ತಿಲ್ಲ. ನಮ್ಮ ಬದುಕು ಕಟ್ಟಿಕೊಳ್ಳುತ್ತಿರುವ ಧರ್ಮದ ಬಗ್ಗೆ ಇವರು ಹೊಲಸು ಅಂತಾರೆ. ಮಾತಾಡೋದು ಮಾತಾಡಿ ಮತ್ತೆ ಚರ್ಚೆಗೆ ಬನ್ನಿ ಅಂತಾನೆ ಎಂದು ಏಕವಚನದಲ್ಲಿಯೇ ಸತೀಶ್ ವಿರುದ್ದ ಹರಿಹಾಯ್ದರು.

Exit mobile version