Site icon PowerTV

ಭೂಕಂಪಕ್ಕೆ ನೇಪಾಳದಲ್ಲಿ 6 ಸಾವು; ದೆಹಲಿಯಲ್ಲಿ ಲಘು ಭೂಕಂಪ ಅನುಭವ

ನೇಪಾಳ; ನೇಪಾಳದ ದೋಟಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಭೂಕಂಪನದ ನಂತರ ಮನೆ ಕುಸಿದು 6 ಜನ ಮೃತಪಟ್ಟಿದ್ದಾರೆ.  ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವು ನೋವು ಹೆಚ್ಚಾಗಿರುವ ಸಾಧ್ಯತೆ ಇದೆ.

ನೇಪಾಳದಲ್ಲಿ ಸಂಭವಿಸಿದ 6.3 ತೀವ್ರತೆಯ ಭೂಕಂಪದ ನಂತರ ಇಂದು ಮುಂಜಾನೆ 2 ಗಂಟೆಯ ಸುಮಾರಿಗೆ ದೆಹಲಿ ಮತ್ತು ಪಕ್ಕದ ನಗರಗಳಲ್ಲಿ ಬಲವಾದ ಕಂಪನಗಳು ಸಂಭವಿಸಿದ್ದು, ಅನೇಕರು ಮಧ್ಯರಾತ್ರಿಯಲ್ಲಿ ತಮ್ಮ ಮನೆಗಳಿಂದ ಹೊರಬಂದಿದ್ದಾರೆ.

ಭೂಕಂಪದ ತೀವ್ರ ಕಂಪನವು ಸುಮಾರು 10 ಸೆಕೆಂಡುಗಳ ಕಾಲ ಆಗಿದೆ. ದೆಲ್ಲಿಯ ನೋಯ್ಡಾ ಮತ್ತು ಗುರುಗ್ರಾಮ್‌ನಿಂದಲೂ ಭೂಕಂಪದ ಅನುಭವವಾಗಿದೆ. ಭೂಕಂಪನದ ಆಳವು ಸುಮಾರು 10 ಕಿ.ಮೀ ನಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಇನ್ನು ಭೂಕಂಪ ಪೀಡಿತ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಸೇನೆಯನ್ನು ಸಜ್ಜುಗೊಳಿಸಲಾಗಿದೆ ಎಂದು ವರಿದಿಯಾಗಿವೆ.

Exit mobile version