Site icon PowerTV

ಒಂದೇ ಕುಟುಂಬದ 7 ಜನರಿಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

ಕೋಲಾರ; ಒಂದೇ ಕುಟುಂಬದ ಏಳು ಜನರಿಗೆ ಚಾಕು ಇರಿದು ಆರೋಪಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾಲೂರು ಪಟ್ಟಣದ ಪಟಾಲಮ್ಮ ಬಡಾವಣೆಯಲ್ಲಿ ನಡೆದಿದೆ.

ಮದ್ಯದ ನಶೆಯಲ್ಲಿದ್ದ ಇಮ್ರಾನ್ ಖಾನ್​ನಿಂದ ನಾಗರಾಜ್, ಪತ್ನಿ ಹೇಮಾವತಿ, ರಾಮು, ನಾಗವೇಣಿ, ಮಕ್ಕಳಾದ ರಾಜೇಶ್ವರಿ, ಚಂದ್ರಕಲಾ, ರೂಪಾಗೆ ಮೇಲೆ ನಿನ್ನೆ ರಾತ್ರಿ ಚಾಕು ಇರಿದಿದ್ದಾನೆ.

ನಾಗರಾಜ್ ಸಹೋದರ ರಾಮು ಬಳಿ ಪಾರಿವಾಳ ವ್ಯಾಪಾರಕ್ಕೆ ಇಮ್ರಾನ್​ ಖಾನ್​ ಬಂದಿದ್ದ, ಈ ವೇಳೆ ನಿನ್ನೆ ರಾತ್ರಿ ವೇಳೆ ಮನೆ ಬಳಿ ಬಂದಿದ್ದಕ್ಕೆ ನಾಗಾರಾಜ್ ರಿಂದ ಆಕ್ಷೇಪ ವ್ಯಕ್ತಪಡಿಸಿ ಹೆಣ್ಣು ಮಕ್ಕಳಿರುವ ಮನೆ ಬಳಿ ರಾತ್ರಿ ವೇಳೆ ಬರಬಾರದು ಅಂತಾ ತಗಾದೆ ತೆಗೆದಿದ್ದಕ್ಕೆ ನಾಗರಾಜ್ ವಿರುದ್ದ ಕುಪಿತಗೊಂಡ ಇಮ್ರಾನ್ ಖಾನ್ ರಿಂದ ಚಾಕು ಇರಿತವಾಗಿದೆ. ಇನ್ನು ಚಾಕು ಇರಿದು ಇಮ್ರಾನ್ ಖಾನ್ ಪರಾರಿಯಾಗಿದ್ದಾನೆ.

ಗಾಯಾಳು ನಾಗರಾಜ್ ಕುಟುಂಬದವರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಾಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version