Site icon PowerTV

ಪಾಲಿಕೆಯಲ್ಲಿ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಹೀನಾಯ ಸೋಲು

ವಿಜಯಪುರ: ವಿಜಯಪುರ ಪಾಲಿಕೆಯಲ್ಲಿ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಹೀನಾಯ ಸೋಲು. ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಅಸಮಾಧಾನ ಪೋಸ್ಟ್. ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. ಪಕ್ಷದ ನಾಯಕ, ಸ್ವಜಾತಿ ನಾಯಕ ವಿರುದ್ಧ ಅಸಮಾಧಾನ ಪೋಸ್ಟ್.

ಪರೋಕ್ಷವಾಗಿ ಶಾಸಕ ಶಿವಾನಂದ ಪಾಟೀಲ, ಯತ್ನಾಳ್ ವಿರುದ್ಧ ಅಸಮಾಧಾನ. ಸಾಮಾಜಿಕ ಜಾಲತಾಣಗಳ ಮೂಲಕ ಸೋಲಿನ ನೋವು ಹೊರ ಹಾಕಿರುವ ಜಿಲ್ಲಾಧ್ಯಕ್ಷೆ. ಇಬ್ಬರು ಜಾತಿ ನಿಷ್ಠೆ ಇಲ್ಲ, ಪಕ್ಷ ನಿಷ್ಠೆ ಇಲ್ಲ, ಮಗಳು ಭಾಷಣ ಮಾಡ್ತಾಳೆ ಜಾತಿ ಬಗ್ಗೆ ನಾಚಿಕೆ ಬರಬೇಕು. ನನಗೆ ಮುಸ್ಲಿಂ ಜನ ಮೋಸ ಮಾಡಿಲ್ಲ. ಇನ್ನೂ ಪಿಚ್ಚರ್ ಬಾಕಿ ಇದೆ ಎಂದು ಇಬ್ಬರೂ ನಾಯಕರಿಗೆ ಎಚ್ಚರಿಕೆ ಕೊಟ್ರಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ.ಪಂಚಮಸಾಲಿ ಸಮಾಜಕ್ಕೆ ಸೇರಿರುವ ವಿದ್ಯಾರಾಣಿ ತುಂಗಳ. ಶಾಸಕರಾದ ಶಿವಾನಂದ ಪಾಟೀಲ, ಯತ್ನಾಳ್ ಪಂಚಮಸಾಲಿ ಸಮಾಜದವರು. ಪಾಲಿಕೆ ಚುನಾವಣೆಯಲ್ಲಿ ತಮ್ಮದೇ ಸಮಾಜದ ನಾಯಕರು ಕೈ ಹಿಡಿಯಲಿಲ್ಲ ಅನ್ನೋ ನೋವು. ವಾರ್ಡ್ ನಂಬರ್ 24 ರಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡಿರುವ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ. ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ವಿಮಲಾ ಕಾಣೆ ಗೆಲುವು.

Exit mobile version